ಆವಣಿ ಅಥವಾ ಆವಂತಿಕಾ ಕ್ಷೇತ್ರ ಎಂದು ಕರೆಯಲ್ಪಡುವ ಹಾಗೂ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಆವಣಿಯಲ್ಲಿ ರಾಮಲಿಂಗೇಶ್ವರ ದೇವಾಲಯವಿದೆ. ಬೆಟ್ಟದ ಮೇಲೆ ಸೀತೆ ವನವಾಸ ಮಾಡಿದ, ಲವಕುಶರು ಜನಿಸಿದ, ರಾಮ ಹಾಗೂ ಲವಕುಶರ ನಡುವೆ ಯುದ್ಧ ನಡೆದ ಹಾಗೂ ವಾಲ್ಮೀಕಿ ಆಶ್ರಮ ಇದೆ ಎಂಬ ಪೌರಾಣಿಕ ಪ್ರತೀತಿಯುಳ್ಳ ಸೀತಾ ಪಾರ್ವತಿ ದೇವಾಲಯವು ಬೆಟ್ಟದ ಮೇಲಿದೆ. ಈ ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿದೆ. ಮಳೆ ಬಂದರೆ, ದೇವಸ್ಥಾನದ ಮೇಲ್ಚಾವಣಿ ಸೋರುತ್ತದೆ.