ಮುಳಬಾಗಿಲು: ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಹಾಗೂ ರಾಜ್ಯದ ಕಟ್ಟಕಡೆ ರಸ್ತೆಯಲ್ಲಿ ಡಾಂಬರು ಸಂಪೂರ್ಣವಾಗಿ ಮಾಯವಾಗಿ ವರ್ಷಗಳೇ ಕಳೆದಿದೆ. ಆಳೆತ್ತರದ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸವಾರರು ಪ್ರಾಣ ಅಂಗೈಯಲ್ಲಿ ಇಟ್ಟುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಕಿರುಮಣಿ ವೃತ್ತದಿಂದ ಆಂಧ್ರಪ್ರದೇಶದ ವನಮಾಲ ದಿನ್ನೆ ಹಾಗೂ ಅಪ್ಪಿಗಾನಹಳ್ಳಿ ಮೂಲಕ ಪುಂಗನೂರು, ರಾಮಸಮುದ್ರಂ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಡಾಂಬರು ಕಿತ್ತು ಬಂದು ಸುಮಾರು ವರ್ಷಗಳಾಗಿವೆ. ಇದರಿಂದ ರಸ್ತೆ ಉದ್ದಕ್ಕೂ ಡಾಂಬರು ಮಾಯವಾಗಿದೆ.

ಅನಂತಪುರ, ಅತ್ತಿಹಳ್ಳಿ ಮತ್ತಿತರ ಗ್ರಾಮಗಳಿಗೆ ಹೋಗುವ ಬಸ್ಗಳು ಗುಂಡಿ ಬಿದ್ದ ರಸ್ತೆಗಳಲ್ಲಿ ವಾಲಿಕೊಂಡು ಸಂಚಾರ ಮಾಡಬೇಕಾದ ಸ್ಥಿತಿ ಇದೆ. ಅಪಾಯ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.