ಗುರುವಾರ , ಜೂನ್ 30, 2022
21 °C

ಕೋಲಾರ: ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಈ ವರ್ಷ ಮುಂಗಾರು ದೇಶದೆಲ್ಲೆಡೆ ಸಾಮಾನ್ಯವಾಗಿದ್ದು, ದೀರ್ಘಾವಧಿ ಸರಾಸರಿ ಶೇ 98 ಇರಬಹುದೆಂದು ಅಂದಾಜಿಸಲಾಗಿದೆ. ಇತ್ತೀಚಿನ ಸೂಚನೆಯಂತೆ ಆಗ್ನೇಯ ವಾಯು ಬಲವರ್ಧಿತಗೊಂಡಿದ್ದು, ಜೂನ್ 3ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಕೇರಳ ಹಾಗೂ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಜೂನ್ 6ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮಳೆಯಾಗಲಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಸೂಚಿಸಿದ್ದಾರೆ.

ಜೂನ್ 3ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 23.1 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 18.4 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 11.8 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 26.8 ಮಿ.ಮೀ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 15.2 ಮಿ.ಮೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ವರದಿ ನೀಡದೆ ಎಂದು ವಿವರಿಸಿದ್ದಾರೆ.

ಜೂನ್ 4ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 15.4 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 13.3 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 15.6 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 11.6 ಮಿ.ಮೀ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 10.9 ಮಿ.ಮೀ ಮಳೆಯಾಗಲಿದೆ. ಜೂನ್ 5ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 29.7 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 24.6 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 22 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 27.4 ಮಿ.ಮೀ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ 24.5 ಮಿ.ಮೀ ಮಳೆ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಜೂನ್ 6ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 11.1 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 9.8 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 14.3 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 7.4 ಮಿ.ಮೀ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 9.1 ಮಿ.ಮೀ ಮಳೆಯಾಗುವ ಮುನ್ಸೂಚನೆಯಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.