ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಬಿಸಿ: ಗ್ರಾಹಕರ ಆತಂಕ

Last Updated 2 ಏಪ್ರಿಲ್ 2022, 2:08 IST
ಅಕ್ಷರ ಗಾತ್ರ

ಮಾಲೂರು: ಹತ್ತಿಪ್ಪತ್ತು ಎಲೆಗಳಿರುವ ಮಾವಿನ ಸೊಪ್ಪಿನ ಒಂದು ಕಟ್ಟಿಗೆ ₹ 15 ದರವಿದೆ. ಕಳೆದ ವರ್ಷ ₹ 10 ಇತ್ತು. ಬೇವಿನ ಸೊಪ್ಪಿಗೂ ಬೆಲೆ ಏರಿಕೆಯಾಗಿದೆ. ನಾವು ಬಾಗಿಲಿಗೆ ತೋರಣ ಕಟ್ಟುವುದೋ, ಬೇಡವೋ ಎಂದು ಇಲ್ಲಿನ ಮಾರುಕಟ್ಟೆಯಲ್ಲಿ ಗ್ರಾಹಕರು ಪೇಚಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಯುಗಾದಿ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಪಟ್ಟಣದ ಬಜಾರು ರಸ್ತೆಗೆ ಬೆಳಿಗ್ಗೆಯಿಂದಲೇ ಗ್ರಾಹಕರು ದಾಂಗುಡಿ ಇಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಹಬ್ಬದ ಆಚರಣೆಗೆ ಕೋವಿಡ್ ಸೋಂಕಿನ ಕರಿಛಾಯೆ ಆವರಿಸಿತ್ತು. ಪ್ರಸಕ್ತ ವರ್ಷ ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೂ ಕಳೆ ಬಂದಿತ್ತು.

ಪಟ್ಟಣದ ಮಾರಿಕಾಂಬ ರಸ್ತೆ, ಮಹಾರಾಜ ವೃತ್ತ, ಹಳೇ ಬಸ್ ನಿಲ್ದಾಣದ ಮಾರುಕಟ್ಟೆ, ಗಾಂಧಿ ಚೌಕದ ಆಸುಪಾಸು ಸೇರಿದಂತೆ ವಾಣಿಜ್ಯ ಚಟುವಟಿಕೆ ಹೆಚ್ಚು ನಡೆಯುವ ಸ್ಥಳಗಳಲ್ಲಿ ಹಬ್ಬದ ಖರೀದಿ ಸಂಭ್ರಮ ಎಲ್ಲೆ ಮೀರಿತ್ತು.

ಕನಕಾಂಬರ ಹೂವಿನ ಬೆಲೆ ನೂರು ಗ್ರಾಂಗೆ ₹ 100 ಇದ್ದ ಪರಿಣಾಮ ಅದನ್ನು ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT