ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಗ್ಗೆಮ್ಮ ವಿಗ್ರಹದ ಮರು ಪ್ರತಿಷ್ಠಾಪನೆ

ಪಾಲಾರ್ ವಾಕಿಂಗ್ ಟೀಮ್‍ನಿಂದ ವಿಶೇಷ ಪೂಜೆ ಸಲ್ಲಿಕೆ
Last Updated 30 ಅಕ್ಟೋಬರ್ 2020, 11:02 IST
ಅಕ್ಷರ ಗಾತ್ರ

ಬೇತಮಂಗಲ: ಪಾಲಾರ್ ಕೆರೆಯ ಏರಿ ಮೇಲೆ ಶಕ್ತಿದೇವತೆ ದುಗ್ಗೆಮ್ಮ ದೇವಿಯ ವಿಗ್ರಹವನ್ನು ಪಾಲಾರ್ ಬ್ರಿಡ್ಜ್‌ ವಾಕಿಂಗ್ ಟೀಮ್‌ನಿಂದ ಮರು ಪ್ರತಿಷ್ಠಾಪನೆ ಮಾಡಲಾಯಿತು.

ಇತ್ತೀಚೆಗೆ ದೇವಿಯ ವಿಗ್ರಹವನ್ನು ಕಲ್ಲಿನಿಂದ ಹೊಡೆದು ಭಗ್ನಗೊಳಿಸಲಾಗಿತ್ತು. ಪ್ರತಿದಿನ ಏರಿಯ ಮೇಲೆ ವಾಕಿಂಗ್ ಮಾಡುವವರ ತಂಡವೊಂದು ತಮಿಳುನಾಡಿನ ಕಲಾವಿದರಿಂದ ದೇವಿಯ ವಿಗ್ರಹ ಕೆತ್ತಿಸಿ ಪ್ರತಿಷ್ಠಾಪನೆ ಮಾಡಿದೆ. ಈ ಕೆರೆಯ ಕೋಡಿ ಹರಿಯುವ ಪ್ರತಿ ಭಾರಿಯೂ ದೇವಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.

‘ಈ ಬಾರಿ ಹಿಂಗಾರು ಹಂಗಾಮು ಉತ್ತಮವಾಗಿದೆ. ಹಾಗಾಗಿ, ಕೆರೆ ತುಂಬುವ ನಿರೀಕ್ಷೆಯಿದೆ. ಕೋಡಿ ಹರಿಯುವ ಮುನ್ನ ಕೆರೆಯನ್ನು ಕಾಪಾಡುವ ದುಗ್ಗೆಮ್ಮ ದೇವಿಗೆ ಶಕ್ತಿ ತುಂಬಬೇಕೆಂಬ ಹಂಬಲದಿಂದ ಹತ್ತು ಜನರ ತಂಡವು ದೇವಿಯನ್ನು ಮರು ಪ್ರತಿಷ್ಠಾಪನೆ ಮಾಡಿದೆ’ ಎಂದು ಪಾಲಾರ್ ವಾಕಿಂಗ್ ಟೀಮ್‍ನ ಸದಸ್ಯ ರಮೇಶ್ ಬಾಬು ತಿಳಿಸಿದರು.

ಗುರುವಾರ ಮುಂಜಾನೆಯೇ ಗಣಪತಿ ಪೂಜೆ, ವೇದಪಾರಾಯಣ, ಪ್ರಾಣ ಪ್ರತಿಷ್ಠೆ, ಕಳಾ ಹೋಮ, ಪ್ರತಿಷ್ಠಾಂಗ ಪ್ರಧಾನ ಹೋಮ, ಪೂರ್ಣಾಹುತಿ, ಕುಂಭ ವಿಸರ್ಜನೆ, ಕುಂಭಾಭಿಷೇಕ, ದೇವಿಗೆ ಪುಷ್ಪ ಅಲಂಕಾರ, ಗಂಗಾಪೂಜೆ, ಲಕ್ಷ್ಮಿ ಪೂಜೆ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಪಾಲಾರ್ ವಾಕಿಂಗ್ ಟೀಮ್ ಸದಸ್ಯರಾದ ನಿವೃತ್ತ ಮುಖ್ಯ‌ಶಿಕ್ಷಕ ಹನುಮಂತಪ್ಪ, ಶ್ರೀಹರಿ, ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಸೇತುರಾಮ್, ಮುಖ್ಯಶಿಕ್ಷಕ ರಾಮಚಂದ್ರಪ್ಪ, ತಿಮ್ಮೇಗೌಡ, ಸುರೇಂದ್ರ ಗೌಡ, ಮುರಳಿ, ನಾರಾಯಣಸ್ವಾಮಿ, ಹುಲ್ಕೂರು ಮಧು, ಅಶ್ವಥಪ್ಪ ದೇವಿಯ ಪ್ರತಿಷ್ಠಾಪನೆಯ ಮುಂದಾಳತ್ವವಹಿಸಿದ್ದರು.

ಪೂಜಾ ಕಾರ್ಯದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅ.ಮು. ಲಕ್ಷ್ಮಿನಾರಾಯಣ, ಹುಲ್ಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಧರಣಿ, ಮಂಜುನಾಥ್, ಅರುಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT