ಮಂಗಳವಾರ, ಮೇ 24, 2022
23 °C

ಸ್ಮಶಾನ ಒತ್ತುವರಿ ತೆರವಿಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗೋಮಾಳ ಜಮೀನಿನಲ್ಲಿರುವ ಸ್ಮಶಾನವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. 

ಸುಗಟೂರು ಹೋಬಳಿ ವೆಲಗಲಬುರ್ರೆ ಗ್ರಾಮದಲ್ಲಿ ಗೋಮಾಳ ಜಮೀನಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ರುದ್ರಭೂಮಿ ಇದೆ. ಸರ್ವೆ ನಂಬರ್‌ 8/1 ರಲ್ಲಿ ಎರಡು ಎಕರೆ 26 ಗುಂಟೆ, ಸರ್ವೆ ನಂಬರ್‌ 8/2 ರಲ್ಲಿ ಎರಡು ಎಕರೆ 26 ಗುಂಟೆ ಜಮೀನು ಇದೆ. ಅದರಲ್ಲಿ ಗ್ರಾಮದ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನವನ್ನು ರಕ್ಷಿಸಿಕೊಡುವಂತೆ ಶುಕ್ರವಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಹೂಹಳ್ಳಿ ನಾಗೇಶ್, ಯಲ್ಲಪ್ಪ, ಮುನಿರಾಜು, ಗ್ರಾಮಸ್ಥರಾದ ವಿ.ಎನ್.ಅರುಣ್‍ಕುಮಾರ್, ವಿ.ಎನ್. ವಿಶ್ವನಾಥ್, ನವೀನ್‍ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.