ಮುಸ್ಲಿಮರ ಹಬ್ಬ ಹಿಂದೂಗಳ ಕೈಯಲ್ಲಿ ಉದ್ಘಾಟಿಸಿ
‘ದಸರಾ ಉದ್ಘಾಟನೆ ಸಮಸ್ಯೆ ರಾಜ್ಯ ಸರ್ಕಾರವನ್ನು ಎಲ್ಲಿಗೆ ಎಳೆದುಕೊಂಡು ಹೋಗುತ್ತದೆಯೋ ನೋಡಬೇಕು. ಮುಸ್ಲಿಮರ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸುವ ಈ ಸರ್ಕಾರ ಮುಸಲ್ಮಾನರ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟಿಸಿದರೆ ಆಗ ಕಾಂಗ್ರೆಸ್ ಮಾಡಿದ್ದು ಸರಿ ಎಂದು ಹೇಳುತ್ತೇನೆ’ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು. ‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದ ಮುಕ್ಕಾಲು ಭಾಗವನ್ನು ಮಾರಾಟಕ್ಕಿಟ್ಟಿದೆ. ಉಳಿದ ಕಾಲು ಭಾಗವನ್ನು ಹಿಂದೂಗಳೆಲ್ಲರೂ ಸೇರಿ ಉಳಿಸಿಕೊಳ್ಳಬೇಕಿದೆ’ ಎಂದರು.