ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಂಡಶೆಟ್ಟಹಳ್ಳಿ: ₹4 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ

Published 3 ಆಗಸ್ಟ್ 2024, 15:12 IST
Last Updated 3 ಆಗಸ್ಟ್ 2024, 15:12 IST
ಅಕ್ಷರ ಗಾತ್ರ

ಟೇಕಲ್: ಕೊಂಡಶೆಟ್ಟಹಳ್ಳಿಯಲ್ಲಿ ₹4ಕೋಟಿ ವೆಚ್ಚದಲ್ಲಿ 500 ಮೀಟರ್‌ನಷ್ಟು ಕಾಂಕ್ರಿಟ್ ರಸ್ತೆ ಹಾಗೂ ದರ್ಗಾ ಬಳಿ ಸೇತುವೆ ನಿರ್ಮಿಸಲಾಗುವುದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಲೂರು–ಬಂಗಾರಪೇಟೆ ರಾಜ್ಯ ಹೆದ್ದಾರಿ 95 ಕೊಂಡಶೆಟ್ಟಹಳ್ಳಿಯಲ್ಲಿ ರಸ್ತೆ ಮೇಲೆ ಸುರಿಯುವ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಗ್ರಾಮದೊಳಗೆ ನೀರು ಬಾರದಂತೆ ದೊಡ್ಡದೊಂದು ಮೋರಿ ನಿರ್ಮಿಸಿ ಅಲ್ಲಿಂದ ನೀರು ಕಾಲುವೆಗೆ ಹರಿದು ಹೋಗುವಂತೆ ಮಾಡಲಾಗುವುದು. ಕಾಂಕ್ರಿಟ್ ರಸ್ತೆ ನಿರ್ಮಿಸಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಗ್ರಾಮದ ದರ್ಗಾ ಬಳಿ ಸುಮಾರು ವರ್ಷಗಳ ಹಿಂದೆ ‌‌ನಿರ್ಮಾಣಗೊಂಡಿರುವ ಸೇತುವೆಯು ಶಿಥಿಲವಾಗಿದೆ. ಅದನ್ನು ಸರಿಪಡಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಎಂ.ಬಿ.ರಾಜು, ಸಹಾಯಕ ಎಂಜಿನಿಯರ್ ರಾಜ್ ಗೋಪಾಲ್, ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ , ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಎಂ.ರಮೇಶ್ ಗೌಡ , ದರಕಾಸ್ತು ಸಮಿತಿ ಸದಸ್ಯ ಸತೀಶ್ ಬಾಬು, ಪ್ರಗತಿ ಶ್ರೀನಿವಾಸ್, ಗ್ರಾಂ.ಪಂ ಅಧ್ಯಕ್ಷೆ ಅರ್ಚನಾ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT