ಕೋಲಾರ: ಸತತ ಮಳೆಗೆ ತಾಲ್ಲೂಕಿನ ಕೂತಾಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಾಳಿಗೆ ಕಾಂಕ್ರೀಟ್ ಭಾನುವಾರ ಕಿತ್ತು ಬಂದಿದೆ. ರಜೆ ಕಾರಣ ಮಕ್ಕಳು ಶಾಲೆಗೆ ಬಾರದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ.

ಹಳೆಯ ವಿದ್ಯಾರ್ಥಿಯೊಬ್ಬರು ಈ ಶಾಲೆಗೆ ಭೇಟಿ ನೀಡಿ ದುಸ್ಥಿತಿಯನ್ನು ಬಯಲು ಮಾಡಿದ್ದಾರೆ.

‘ನಾನು ಓದಿದ ಶಾಲೆ ಇದು. ನಾವು ವಿದ್ಯಾರ್ಥಿಗಳಿಗೆ ಲೇಖನ, ಪುಸ್ತಕ ಹಾಗೂ ಇನ್ನಿತರ ಸಾಮಗ್ರಿ ತಂದುಕೊಡಬಹುದು. ಆದರೆ, ಶಾಲೆ ಕಟ್ಟಡ ಕಟ್ಟಿಸಿ ಕೊಡಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಮಕ್ಕಳು ಶಾಲೆಯಲ್ಲಿದ್ದು, ಮಹಡಿಯ ಕಾಂಕ್ರೀಟ್ ಕುಸಿದು ಬಿದ್ದಿದ್ದರೆ ಅವರ ಗತಿ ಏನು? ಯಾರು ಹೊಣೆ? ಕ್ಷೇತ್ರ ಶಿಕ್ಷಣಾಧಿಕಾರಿಗಳು ಏನು ಮಾಡುತ್ತಿದ್ದಾರೆ? ಕೂಡಲೇ ಈ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಈ ರೀತಿ ದುಸ್ಥಿತಿಯಿಂದಲೇ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರಿಯಾದ ಕಟ್ಟಡ, ಶೌಚಾಲಯ, ಬೆಂಚು, ಕುರ್ಚಿಗಳು ಇಲ್ಲ. ಇಂಥ ಹಲವಾರು ಶಾಲೆಗಳು ಇವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.