ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಚಿಮಕಲಹಳ್ಳಿ ಸರಣಿ ಸಾವು: ಕುಡಿಯುವ ನೀರು ಯೋಗ್ಯವಲ್ಲ

ಎನ್.ಚಮಕಲಹಳ್ಳಿಯಲ್ಲಿ ಉಂಟಾಗಿದ್ದ ಸರಣಿ ಸಾವು
Last Updated 25 ನವೆಂಬರ್ 2019, 9:50 IST
ಅಕ್ಷರ ಗಾತ್ರ

ನಂಗಲಿ: ಈಚೆಗೆ ಸರಣಿ ಸಾವಿನಿಂದ ಸುದ್ದಿಯಾಗಿದ್ದ ಎನ್.ಚಮಕಲಹಳ್ಳಿ ಗ್ರಾಮದ ಕುಡಿಯುವ ನೀರಿನ ಮಾದರಿಯನ್ನು ವೈದ್ಯಾಧಿಕಾರಿಗಳು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದ್ದರು, ಪರೀಕ್ಷಾ ವರದಿ ದೊರೆತಿದ್ದು ಅದರ ಪ್ರಕಾರ ಓವರ್ ಹೆಡ್ ಟ್ಯಾಂಕ್ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ.

ಈಚೆಗೆ ಎನ್.ಚಮಕಲಹಳ್ಳಿಯಲ್ಲಿ 45 ದಿನಗಳ ಅಂತರದಲ್ಲಿ 11 ಜನರು ಸಾವನ್ನಪ್ಪಿದ್ದರಿಂದ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ತಾಲ್ಲೂಕು ಅಧಿಕಾರಿಗಳ ತಂಡವೇ ಗ್ರಾಮಕ್ಕೆ ಭೇಟಿ ನೀಡಿ, ರೋಗಿಗಳ ರಕ್ತ ಮತ್ತು ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದರು. ವರದಿ ಪ್ರಕಾರ ಶುದ್ದ ಕುಡಿಯುವ ನೀರು ಪೂರೈಸುವ ಘಟಕದ ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಓವರ್ ಹೆಡ್ ಟ್ಯಾಂಕ್ ಮತ್ತು ನಲ್ಲಿಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂದು ತಿಳಿಸಲಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಾಲಿನಿ, ಗ್ರಾಮದಲ್ಲಿ ಖಲೀಲ್ ಸಾಬ್ ಮನೆಯ ಬಳಿ ಇರುವ ಓವರ್ ಹೆಡ್ ಟ್ಯಾಂಕ್ ಮತ್ತು ಗ್ರಾಮದ ನಲ್ಲಿಗಳ ನೀರಿನಲ್ಲಿ ಚರಂಡಿಯ ನೀರು ಮಿಶ್ರಣವಾಗಿರಬಹುದು, ಅಥವಾ ಪೈಪ್ ಲೈನ್ ಹಾಳಾಗಿ ಕಲ್ಮಶ ನೀರು ಕುಡಿಯುವ ನೀರಿನೊಂದಿಗೆ ಬೆರೆತಿರಬಹುದು. ಆದ್ದರಿಂದ ನಲ್ಲಿ ಮತ್ತು ಓವರ್ ಹೆಡ್ ಟ್ಯಾಂಕ್ ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT