ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ಕ್ಕೆ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ

ಬಿಇಎಂಎಲ್ ಕಾರ್ಖಾನೆ ಖಾಸಗೀಕರಣದ ವಿರುದ್ಧ ಆಕ್ರೋಶ
Last Updated 11 ಜನವರಿ 2021, 2:09 IST
ಅಕ್ಷರ ಗಾತ್ರ

ಬಂಗಾರಪೇಟೆ: ಕೇಂದ್ರ ಸರ್ಕಾರಿ ಸಾಮ್ಯದ ಬಿಇಎಂಎಲ್ ಕಾರ್ಖಾನೆಯನ್ನುಖಾಸಗೀಕರಣ ಮಾಡಿ, ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜ.15ರಂದು ಟ್ರಾಕ್ಟರ್ ಸಮೇತ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ಕೇಂದ್ರ ಸರ್ಕಾರ ಜನಾಭಿಪ್ರಾಯ ಇಲ್ಲದೆ ಏಕಾಏಕಿ ರೈತ, ಪರಿಶಿಷ್ಟ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಕೋಟ್ಯಂತರ ಬಡ ಕುಟುಂಬಗಳನ್ನು ಬೀದಿಗೆ ತಂದಿದೆ. ಮತ್ತೊಂದೆಡೆ ದೇಶವನ್ನು ಖಾಸಗಿ ಕಂಪನಿ ಮಾಲೀಕರ ಕೈಗೆ ಕೊಟ್ಟು ಮತ್ತೆ ಗುಲಾಮಗಿರಿಗೆ ನೂಕುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಬಿಇಎಂಎಲ್‌ಗೆ 60 ವರ್ಷದ ಇತಿಹಾಸವಿದೆ. ₹5 ಕೋಟಿ ಬಂಡವಾಳದಲ್ಲಿ ಆರಂಭಿಸಿದ ಕಾರ್ಖಾನೆ ಲಕ್ಷಾಂತರ ಜನಕ್ಕೆ ಉದ್ಯೋಗ ಕಲ್ಪಿಸಿಕೊಟ್ಟಿದೆ. ಹೆಚ್ಚು ಆದಾಯ ಬರುತ್ತಿರುವ ಕಾರ್ಖಾನೆಯನ್ನು ಏಕಾಏಕಿ ಖಾಸಗೀಕರಣ ಮಾಡುವ ಅಗತ್ಯವೇನು ಎಂದು
ಪ್ರಶ್ನಿಸಿದರು.

ವಿಭಾಗೀಯ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ, ಪ್ರಧಾನ ಮಂತ್ರಿಗಳು ಈಗಾಗಲೇ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳ ಮಾಲೀಕರಿಗೆ ಅಡವಿಟ್ಟು, ಆಹಾರದ ಅಭಾವ ಸೃಷ್ಟಿಸಿದೆ. ಮತ್ತೊಂದೆಡೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೆಲಸ ಇಲ್ಲದೆ ಯುವಕರು ಆತ್ಮಹತ್ಯೆಗೆ ಯತ್ನಿಸುವ ಸ್ಥಿತಿ ಎದುರಾಗಲಿದೆ ಎಂದರು.

ಯುವ ಮುಖಂಡ ಚಲಪತಿ, ಶ್ರೀನಿವಾಸಗೌಡ, ತಾಲ್ಲೂಕು ಅಧ್ಯಕ್ಷ ಐತಂಡಹಳ್ಳಿ ಮುನ್ನ, ನೀಕಿತ್, ಅನುಬ್‌ರಾಜು, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ತಾಲ್ಲೂಕು ಅಧ್ಯಕ್ಷ ಚಾಂದ್‌ ಪಾಷ, ಜಮೀರ್‌ ಪಾಷ, ಜಾವೀದ್, ನವಾಜ್‌ ಪಾಷ, ಆಶೋಕ್, ಮಹಮ್ಮದ್ ಬೂರಾನಾ, ನಲ್ಲಂಡಹಳ್ಳಿ ಕೇಶವ, ನವೀನ್, ವೇಣು, ಗೌಸ್‌ ಪಾಷ, ಸುಪ್ರಿಂಚಲ, ಮಂಜುನಾಥ, ಬಾಬಾಜಾನ್, ನಸೀಮ್, ಮಹಮದ್ ಶೋಹಿಬ್, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ, ಕಣ್ಣೂರು ಮಂಜು, ಮಾಸ್ತಿ ವೆಂಕಟೇಶ್, ತೆರ್ನಹಳ್ಳಿ ಆಂಜಿನಪ್ಪ, ಪಾರುಕ್‌ ಪಾಷ, ಹೆಬ್ಬಣಿ ಆನಂದರೆಡ್ಡಿ, ಯಲುವಹಳ್ಳಿ ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT