ಮುಳಬಾಗಿಲು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕರುನಾಡ ಕನ್ನಡ ಸಂಘದ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಅಲ್ಲದೆ, ಇದೇ ವೇಳೆ ಪರಿಸರ ದಿನವನ್ನೂ ಆಚರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ವಿ. ಗೀತಾ, ‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ನಾಡು, ನುಡಿಯನ್ನು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.

ಅತ್ಯಂತ ಹೆಚ್ಚು ಪ್ರಾಚೀನ ಹಾಗೂ ದೊಡ್ಡದಾದ ಕನ್ನಡ ಭಾಷೆಯ ಸಾಧಕರಿಗೆ ಬೂಕರ್, ಜ್ಞಾನಪೀಠ, ಪದ್ಮಭೂಷಣ, ಪದ್ಮ–ವಿಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಎಲ್ಲ ರೀತಿಯ ಪ್ರಶಸ್ತಿಗಳು ಸಿಕ್ಕಿವೆ. ಇಂಥ ಭಾಷೆಯನ್ನು ವಿದ್ಯಾರ್ಥಿಗಳು ಅಪ್ಪಿಕೊಂಡು ಪ್ರೀತಿಯಿಂದ ಓದಿದಾಗ 125 ಅಂಕಗಳನ್ನು ಪಡೆಯಲು ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಸಾಧಕರಾಗಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಗೋಪಾಲಗೌಡ ಮಾತನಾಡಿ, ಶೈಕ್ಷಣಿಕ ವಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭಾಷೆಯ ಆಯಕಟ್ಟು ಇರುವುದಿಲ್ಲ. ಅವರ ವಿದ್ಯಾಭ್ಯಾಸದಲ್ಲಿ ಹಲವಾರು ವಿಷಯಗಳಿದ್ದು, ಅದರ ಜೊತೆ ಕನ್ನಡ ಭಾಷೆ ಇರುತ್ತದೆ. ಹೀಗಾಗಿ, ವಿದ್ಯಾರ್ಥಿಗಲು ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಎಸ್ಡಿಸಿ ಪ್ರಾಂಶುಪಾಲ ಮುರಳಿಕೃಷ್ಣ, ಬ್ರಾಹ್ಮಣರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಸ್. ಶ್ರೀನಿವಾಸಮೂರ್ತಿ, ಕರುನಾಡು ಕನ್ನಡ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ. ಜನಾರ್ಧನ್, ನಂದ ಕಿಶೋರ್, ಆರ್. ಅರುಣ್ ಕುಮಾರ್, ಪ್ರಾಂಶುಪಾಲ ನವೀದ್ ಸಿದ್ದಲಿಂಗಯ್ಯ, ಅತ್ತಿಕುಂಟೆ ಸುಬ್ರಮಣಿ, ಶ್ರೀರಾಮ್, ಎಂ.ಶಿವಣ್ಣ, ಕಿಶೋರ್, ಬ್ರಹ್ಮಯ್ಯ, ಜಿಎಸ್ ಕವಿತಾ, ಜಿ.ಪುಷ್ಪ, ಜಿ.ರವೀಂದ್ರ, ಬಾಬು, ಪತ್ರಿಕಾ ಕಾರ್ಯದರ್ಶಿ ಅತ್ತಿಕುಂಟೆ ಎಸ್.ಸುಬ್ರಮಣಿ, ಮೋಹನ್ ಸಿಂಗ್, ವಿ.ಕೆ.ಕೃಷ್ಣಪ್ಪ, ನಾಗೇಂದ್ರ, ನಾಗಭೂಷಣಾಚಾರ್, ಹೆಚ್.ವಿ.ಸುಬ್ರಮಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.