ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕೆ ಬೇಡಿಕೆ ಇಟ್ಟರೆ ದೂರು ಕೊಡಿ

ರೈತ ದಿನಾಚರಣೆ, ಪೋಡಿ ಆಂದೋಲನಕ್ಕೆ ತಹಶೀಲ್ದಾರ್ ನಾಗರಾಜ್‌ ಚಾಲನೆ
Last Updated 27 ಡಿಸೆಂಬರ್ 2022, 6:12 IST
ಅಕ್ಷರ ಗಾತ್ರ

ಕೋಲಾರ: ‘ಯಾವುದೇ ಕಾರಣಕ್ಕೆ ತಹಶೀಲ್ದಾರ್‌ ಕಚೇರಿ ಆವರಣಕ್ಕೆ ಮಧ್ಯವರ್ತಿಗಳಿಗೆ ಪ್ರವೇಶ ಇಲ್ಲ. ಯಾರಾದರೂ ನನ್ನ ಹೆಸರು ಹಾಗೂ ಸಂಘಟನೆ ಹೆಸರು ಹೇಳಿಕೊಂಡು ಕೆಲಸ ಮಾಡಿಕೊಡಿಸುವುದಾಗಿ ಹಣಕ್ಕೆ ಬೇಡಿಕೆ ಇಟ್ಟರೆ ಲೋಕಾಯುಕ್ತಕ್ಕೆ ದೂರು ಕೊಡಿ. ಇಲ್ಲವೇ ನನಗೆ ನೇರವಾಗಿ ದೂರುಕೊಡಿ’ ಎಂದು ಕೋಲಾರ ತಹಶೀಲ್ದಾರ್‌ ವಿ.ನಾಗರಾಜ್‌ ಹೇಳಿದರು.

ತಾಲ್ಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಪಿ ನಂಬರ್‌ ದುರಸ್ತಿ ಆಂದೋಲನ (ಪೋಡಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪೋಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ದಾಖಲಾತಿ ಸರಿ ಇದ್ದರೆ ಅರ್ಜಿ ನೀಡಿದ 30 ದಿನಗಳಲ್ಲಿ ಪಿ ನಂಬರ್‌ ದುರಸ್ತಿ ಮಾಡಿಕೊಡಲಾಗುವುದು. ಈ ವಿಚಾರವಾಗಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಜನರಿಗೆಒಳ್ಳೆಯ ಕೆಲಸ ಮಾಡಿಕೊಡಲುಭಯವೇಕೆ’ ಎಂದುಪ್ರಶ್ನಿಸಿದರು.

‘ಸರ್ಕಾರದಿಂದ ಮಂಜೂರಾಗಿರುವ ಜಮೀನು ಸರ್ವೆ ಸಂಖ್ಯೆಯಲ್ಲಿ ಪಿ ಸಂಖ್ಯೆ ಇರುವುದರಿಂದ ನೋಂದಣಿ ಮಾಡಿಕೊಡಲು ಆಗುತ್ತಿಲ್ಲ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಹಾಗೂ ಜಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಪಿ ಸಂಖ್ಯೆ ಸಮಸ್ಯೆಯಿಂದಾಗಿ ಜನರು ಕಚೇರಿಗೆ ಅಲೆಯುತ್ತಿರುವುದರಿಂದ ಈ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ತಾಲ್ಲೂಕಿನಲ್ಲಿರುವ 7 ಸಾವಿರಕ್ಕೂ ಹೆಚ್ಚಿನ ಪಿ ಸಂಖ್ಯೆಗಳನ್ನು ದುರಸ್ತಿಗೊಳಿಸಿ ಹೊಸ ಸಂಖ್ಯೆ ನೀಡಲಾಗುವುದು’ ಎಂದುಹೇಳಿದರು.

‘ಬಹುತೇಕರ ಬಳಿ ಮೂಲ ದಾಖಲೆಗಳಿದ್ದರೂ ದುರಸ್ತಿಯಾಗಿಲ್ಲ. ನೇರವಾಗಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಿ, ಹಣ ನೀಡದೆ ಕೆಲಸ ಮಾಡಿಸಿಕೊಂಡು ಹೋಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಹಣ ಕೇಳುವುದು ಹಾಗೂ ನೀಡುವುದು ಕಂಡುಬಂದರೆ ಇಬ್ಬರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಅಬ್ಬಣಿ ಶಿವಪ್ಪ ಮಾತನಾಡಿ, ‘ಹಿಂದೆ ಜಿಲ್ಲಾಕಾರಿಯಾಗಿದ್ದ ಡಿ.ಕೆ.ರವಿ ಪಿ ಸಂಖ್ಯೆ ದುರಸ್ತಿ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅದೇ ಮಾದರಿಯಲ್ಲಿ ನಾಗರಾಜ್‌ ‌ಪೋಡಿ ಆಂದೋಲನ ಹಮ್ಮಿಕೊಂಡಿದ್ದಾರೆ’ ಎಂದರು.

ರೈತ ಸಂಘದ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಎ.ನಳಿನಿ ಗೌಡ, ‘ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಕಾಟ ಹೆಚ್ಚಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಪೋಡಿ ಅದಾಲತ್‌ ಉಪಯೋಗವಾಗಲಿದೆ. ಎಲ್ಲರೂ ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಮುಖಂಡ ರಾಮೇಗೌಡ ಮಾತನಾಡಿ. ‘ರೈತರ ಹೆಸರಲ್ಲಿ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ. ಕೆಲಸ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡುತ್ತಿರುವವರಿಗೆಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು. ‌

ರೈತ ಸಂಘದ ರಾಜ್ಯಉಪಾಧ್ಯಕ್ಷಕೆ.ನಾರಾಯಣಗೌಡ, ‘ಪಿ ಸಂಖ್ಯೆ ದುರಸ್ತಿ ವಿಚಾರದಲ್ಲಿ ತಹಶೀಲ್ದಾರ್‌ ನಾಗರಾಜ್‌ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಡಿ.ಕೆ.ರವಿ ಅವರ ಮಾದರಿ ಅನುಸರಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT