ಬುಧವಾರ, ಏಪ್ರಿಲ್ 14, 2021
25 °C

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜೀವನದಲ್ಲಿ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾದದ್ದು. ಗುರುವಾಗುವ ಗುರಿಯೊಂದಿಗೆ ಸಾಗುತ್ತಿರುವವರು ಉತ್ತಮ ಶಿಕ್ಷಕರಾಗಿ ದೇಶಕ್ಕೆ ಸಂಸ್ಕಾರ, ಸನ್ನಡತೆಯ ಮಾನವ ಸಂಪನ್ಮೂಲ ಕೊಡುಗೆಯಾಗಿ ನೀಡಿ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿ.ಇಡಿ ಬೋಧನಾ ತರಬೇತಿ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಅರಾಭಿಕೊತ್ತನೂರು ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರತಿ ಸಾಧಕನ ಹಿಂದೆ ಶಿಕ್ಷಕರು ಇರುತ್ತಾರೆ. ಗುರುವಿನ ಮಾರ್ಗದರ್ಶನವಿಲ್ಲದೆ ಯಾವುದೇ ಸಾಧನೆ ಅಸಾಧ್ಯ’ ಎಂದರು.

‘ಗುರುವಾಗುವ ಕಾತರತೆಯಿಂದ ಬೋಧನಾ ತರಬೇತಿ ಮುಗಿಸಿ ಹೋಗುತ್ತಿರುವವರು ಉತ್ತಮ ಶಿಕ್ಷಕರಾಗಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶ್ರೇಯೋಭಿವೃದ್ಧಿಗೆ ಸಾಧನೆ ಧಾರೆಯೆರೆಯಿರಿ. ಶಾಲೆಯ ಪರಿಸರ ಹಸಿರಾಗಿಸಲು ಪ್ರಯತ್ನ ಮಾಡಿ’ ಎಂದು ತಿಳಿಸಿದರು.

‘ಪೋಷಕರು ತಮ್ಮ ಮಕ್ಕಳು ಎಂಜಿನಿಯರ್, ವೈದ್ಯರಾಗಬೇಕೆಂದು ಬಯಸುತ್ತಾರೆ. ಮಕ್ಕಳು ಶಿಕ್ಷಕರಾಗಬೇಕೆಂದು ಬಯಸುವ ಪೋಷಕರ ಸಂಖ್ಯೆ ಕಡಿಮೆ. ಆದರೆ, ಅದೇ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರ ಬೇಕೆಂದು ಹುಡುಕಾಡುತ್ತಾರೆ’ ಎಂದು ನಿವೃತ್ತ ಶಿಕ್ಷಕ ಎಸ್.ಅನಂತಪದ್ಮನಾಭ್ ಹೇಳಿದರು.

ಬಿ.ಇಡಿ ಪ್ರಶಿಕ್ಷಣಾರ್ಥಿಗಳಯ ಅನಿಸಿಕೆ ಹಂಚಿಕೊಂಡರು. ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಶ್ವೇತಾ, ಫರೀದಾ, ಆರ್.ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ವಸಂತಮ್ಮ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.