ಭಾನುವಾರ, ಅಕ್ಟೋಬರ್ 25, 2020
27 °C

ಬಲಿಷ್ಠ ರಾಷ್ಟ್ರಕ್ಕೆ ಶಿಕ್ಷಕರು ನಿರ್ಣಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ. ಶಿಕ್ಷಕ ವೃತ್ತಿಯ ಘನತೆ ಗೌರವ ಉಳಿಸಿಕೊಂಡು ಹೋದವರು ಸಮಾಜದಲ್ಲಿ ಪೂಜ್ಯನೀಯ ವ್ಯಕ್ತಿಗಳಾಗುತ್ತಾರೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ರೋಟರಿ ಕೋಲಾರ ಹಾಗೂ ರೋಟರಿ ಕೋಲಾರ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಯೋಜಿಸಿದ್ದ ಗುರುವಂದನೆ ಮತ್ತು ಹಿರಿಯ ರೋಟೇರಿಯನ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪುರಾಣ ಪುಣ್ಯ ಕಾಲದಿಂದಲೂ ಗುರುವಿಗೆ ಶ್ರೇಷ್ಠ ಸ್ಥಾನ ಉಳಿಸಿಕೊಂಡು ಬರಲಾಗುತ್ತಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ಅವರ ಮೊದಲ ಶಿಕ್ಷಣದ ಪಂಕ್ತಿಯು ದೇಶದೆಲ್ಲೆಡೆ ನಂದಾದೀಪವಾಗಿ ಬೆಳಗುವಂತಾಗಿದೆ’ ಎಂದು ಹೇಳಿದರು.

‘ಸಮಾಜವನ್ನು ಶಿಕ್ಷಣದ ಮೂಲಕ ತಿದ್ದುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಕಾಯ ವಾಚ ಮನಸ್ಸಾ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ಶಿಕ್ಷಕರನ್ನು ಗೌರವಾಧರ ಹುಡುಕಿಕೊಂಡು ಬರುತ್ತವೆ’ ಎಂದು ತಿಳಿಸಿದರು.

ಶಿಕ್ಷಕರು ಮತ್ತು ರೋಟರಿ ಸಂಸ್ಥೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ರೋಟೇರಿಯನ್‌ಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್, ರೋಟರಿ ಅಧ್ಯಕ್ಷ ಕೆ.ಆರ್.ಸೋಮಶೇಖರ್, ಕಾರ್ಯದರ್ಶಿ ಎಂ.ಎಸ್.ರವಿ, ಕೋಲಾರ ರೋಟರಿ ಟ್ರಸ್ಟ್‌ ಅಧ್ಯಕ್ಷ ಎಸ್.ವಿ.ಸುಧಾಕರ್, ಕಾರ್ಯದರ್ಶಿ ಟಿ.ಎಸ್.ರಾಮಚಂದ್ರೇಗೌಡ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.