ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಉಡುಗೊರೆಗಾಗಿ ಶಿಕ್ಷಕರ ಗಲಾಟೆ!

Published 3 ಜೂನ್ 2024, 23:32 IST
Last Updated 3 ಜೂನ್ 2024, 23:32 IST
ಅಕ್ಷರ ಗಾತ್ರ

ಕೆಜಿಎಫ್‌ (ಕೋಲಾರ): ಮತದಾನ ಮಾಡಲು ಬಂದ ಕೆಲವು ಶಿಕ್ಷಕರು ತಮಗೆ ಇನ್ನೂ ಗಿಫ್ಟ್ ಬಂದಿಲ್ಲ, ಸೀರೆ ಕೊಟ್ಟಿಲ್ಲ, ಹಣದ ಕವರ್ ಸೇರಿಲ್ಲ ಎಂದು ಸೋಮವಾರ ಮತದಾನ ಕೇಂದ್ರದ ಬಳಿ ತಗಾದೆ ತೆಗೆದರು.

ಮತದಾನ ಮಾಡದೇ ನೇರವಾಗಿ ಅಭ್ಯರ್ಥಿಗೆ ಕರೆ ಮಾಡಿದ ಕೆಲವು ಶಿಕ್ಷಕರು, ‘ನಮಗೆ ಬರಬೇಕಾಗಿದ್ದು ಇನ್ನೂ ಬಂದಿಲ್ಲ’ ಎಂದು ದೂರು ಹೇಳಿದರು.

ಪಕ್ಷೇತರ ಅಭ್ಯರ್ಥಿಯೊಬ್ಬರು ತಲಾ ₹10 ಸಾವಿರ ಇದ್ದ ಕವರ್ ಕೊಟ್ಟಿದ್ದಾರೆ ಎಂಬ ವಿಷಯ ಸ್ಥಳೀಯವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಬ್ಬ ಅಭ್ಯರ್ಥಿಯು ಮಹಿಳೆಯರಿಗೆ ಸೀರೆ, ಪುರುಷರಿಗೆ ವಾಚ್‌, ಕವರ್ ಕೊಟ್ಟಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಸೀರೆ ಮತ್ತು ಕವರ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

‘ಎಲ್ಲಾ ಅಭ್ಯರ್ಥಿಗಳಿಂದ ಪ್ರತಿ ಮತದಾರರಿಗೆ ಸುಮಾರು ₹ 21 ಸಾವಿರ ಬಂದಿದ್ದರೂ, ಇನ್ನೂ ಗಿಫ್ಟ್ ಬಂದಿಲ್ಲ.ಕವರ್ ಬಂದಿಲ್ಲ ಎಂದು ಶಿಕ್ಷಕರು ಗೊಣಗಾಡುತ್ತಿದ್ದಾರೆ’ ಎಂದು ರಾಜಕೀಯ ಪಕ್ಷವೊಂದರ ಮುಖಂಡರು ಮತಗಟ್ಟೆ ಬಳಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT