ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ನಡೆದ ಹರಾಜಿನಲ್ಲಿ ಎರಡು ತಿಂಗಳಿನಲ್ಲೇ ತೀರಾ ಕಡಿಮೆ ಬೆಲೆಗೆ ಟೊಮೆಟೊ ಹರಾಜಾಗಿದೆ.
15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ ಕನಿಷ್ಠ ₹ 50 ಹಾಗೂ ಗರಿಷ್ಠ ₹ 300 ಕ್ಕೆ ಮಾರಾಟವಾಗಿದೆ. ಕಡಿಮೆ ಗುಣಮಟ್ಟದ ಕೆ.ಜಿ ಟೊಮೆಟೊಗೆ ಸರಾಸರಿ ಕನಿಷ್ಠ ₹ 3 ಹಾಗೂ ಗುಣಮಟ್ಟದ ಟೊಮೆಟೊಗೆ ಗರಿಷ್ಠ ₹20 ಸಿಕ್ಕಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹ 15ರಿಂದ 20 ಇದೆ. 15 ಕೆ.ಜಿ ಸೀಡ್ ಟೊಮೆಟೊ ಬಾಕ್ಸ್ ದರ ₹ 190ಕ್ಕೆ ಕುಸಿದಿದೆ.
ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಈ ಋತುವಿನಲ್ಲಿಯೇ ದಾಖಲೆ ಪ್ರಮಾಣದ ಟೊಮೆಟೊ ಆವಕವಾಗಿದೆ. 21,240 ಕ್ವಿಂಟಲ್ ಅಂದರೆ 1,41,600 ಬಾಕ್ಸ್ ಟೊಮೆಟೊ ಆವಕವಾಗಿದೆ.