ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ ಅವಹೇಳನ: ಇಬ್ಬರು ವಶಕ್ಕೆ

ಇನ್‌ಸ್ಟಾ ಅವಹೇಳನಕಾರಿ ಚಿತ್ರ: ಬಾಲಕ ವಶಕ್ಕೆ
Published 18 ಜನವರಿ 2024, 22:31 IST
Last Updated 18 ಜನವರಿ 2024, 22:31 IST
ಅಕ್ಷರ ಗಾತ್ರ

ಬೇತಮಂಗಲ (ಕೋಲಾರ): ಸಾಮಾಜಿಕ ಜಾಲತಾಣದಲ್ಲಿ ರಾಮನ ಕುರಿತು ಅವಹೇಳನ ಮಾಡಿದ ಸಂಬಂಧ ಕೆಜಿಎಫ್‌ ಪೊಲೀಸರು ಗುರುವಾರ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಕೆಜಿಎಫ್‌ ತಾಲ್ಲೂಕಿನ ಸುಂದರಪಾಳ್ಯ ಗ್ರಾಮದ ಇಬ್ಬರು ಯುವಕರು ಇನ್‌ಸ್ಟಾಗ್ರಾಂನಲ್ಲಿ ರಾಮನನ್ನು ಅವಹೇಳನ ಮಾಡಿದ್ದಾರೆ. ಒಬ್ಬರು ಪೋಸ್ಟ್‌ ಮಾಡಿದರೆ, ಮತ್ತೊಬ್ಬರು ಟ್ಯಾಗ್‌ ಮಾಡಿದ್ದಾರೆ’ ಎಂದು ಸ್ಥಳೀಯರು ಬೇತಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಸೈಬರ್‌ ಅಪರಾಧ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ವಶಕ್ಕೆ: ಇನ್‌ಸ್ಟಾಗ್ರಾಂನಲ್ಲಿ ಎಡಿಟ್‌ ಮಾಡಿದ ಅನುಚಿತ ಚಿತ್ರ ಹಾಕಿದ್ದ 14 ವರ್ಷದ ಬಾಲಕನನ್ನು ಮುಳಬಾಗಿಲು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಸೀದಿ ಮೇಲೆ ಕೃಷ್ಣ ಮತ್ತು ರಾಮನ ಭಾವಚಿತ್ರ, ಮಸೀದಿಯ ಗೋಪುರಗಳ ಮೇಲೆ ಕೇಸರಿ ಬಾವುಟ‌, ಟಿಪ್ಪು ಸುಲ್ತಾನ್ ಚಿತ್ರಕ್ಕೆ ರಾಮ ಬಾಣ ಬಿಡುವ ರೀತಿ ಎಡಿಟ್ ಮಾಡಿದ ಚಿತ್ರವನ್ನು ಇನ್‌ಸ್ಟಾಗ್ರಾಂ ಸ್ಟೇಟಸ್‌ಗೆ ಹಾಕಿಕೊಂಡಿದ್ದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT