ಕೋಲಾರ: ವಿಧಾನಸಭೆ ಚುನಾವಣೆಯ ಮರು ಮತ ಎಣಿಕೆ ಬಳಿಕ ಕೆ.ಎಸ್.ಮಂಜುನಾಥಗೌಡ ಮಾಲೂರು ಬಿಡುವುದು ಖಚಿತ. ಶಾಂತಿ ಸ್ವಭಾವದ ಮಾಲೂರು ತಾಲ್ಲೂಕು ಅವರಂಥವರನ್ನು ಸಹಿಸಲ್ಲ. ಈಗಾಗಲೇ ಅವರ ದೌರ್ಜನ್ಯ, ದಬ್ಬಾಳಿಕೆಯನ್ನು ಜನ ನೋಡಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದರು.

ನಗರ ಹೊರವಲಯದಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್) ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸೋಲಿನ ಸುಳಿವು ಸಿಕ್ಕಿ ಈಗ ಮತ್ತೊಂದು ಅನುಮಾನ ವ್ಯಕ್ತಪಡಿಸುತ್ತಿದ್ದು ಎಣಿಕೆ ನಡೆದು ತುಂಬಾ ದಿನಗಳಾಗಿದೆ. ಮತ ಯಂತ್ರಗಳು ಕೆಟ್ಟು ಹೋಗಿರುವ ಸಾಧ್ಯತೆಗಳಿವೆ ಎಂದಿದ್ದಾರೆ. ಮರು ಚುನಾವಣೆ ನಡೆದರೂ ನಡೆಯಬಹುದು ಎಂದಿದ್ದಾರೆ. ಮರು ಎಣಿಕೆಯಾದರೆ ಗೆಲ್ಲಲ್ಲ ಎಂಬುದು ಅವರಿಗೆ ಗೊತ್ತಾಗಿದೆ’ ಎಂದು ಟೀಕಿಸಿದರು.

ನವೆಂಬರ್ನಲ್ಲಿ ಮರು ಮತ ಎಣಿಕೆ ನಡೆದು ನನ್ನ ಪರ ಫಲಿತಾಂಶ ಬರಲಿದೆ. ಅವರು ಏನು ಭಾವಿಸಿದ್ದಾರೆಯೋ ಅದು ಮೂರನೇ ಬಾರಿ ಸುಳ್ಳಾಗಲಿದೆ. ಯಾವುದೇ ಕಾರಣಕ್ಕೂ ನನಗೆ ಭಯ ಇಲ್ಲ. ಅಧಿಕಾರ ದಾಹವೂ ಇಲ್ಲ ಎಂದರು.

‘ಕೊಮ್ಮನಹಳ್ಳಿ ಬಚ್ಚೇಗೌಡರ ಮನೆ, ಎಲ್ಲೇಗೌಡರ ಕುಟುಂಬ ಅಂದರೆ ಒಂದು ಇತಿಹಾಸ ಇದೆ. ಜಮೀನ್ದಾರ ಹಾಗೂ ಗೌರವಸ್ಥ ಕುಟುಂಬ ನಮ್ಮದು. ನನಗೆ ರಾಜಕಾರಣದ ಹಿನ್ನೆಲೆ ಇಲ್ಲ. ನಾನೇ ರಾಜಕೀಯ ಅವಕಾಶ ಸೃಷ್ಟಿ ಮಾಡಿಕೊಂಡೆ. 1986ರಲ್ಲಿ ರಾಜಕೀಯ ಪ್ರವೇಶ ಮಾಡಿದೆ. ನನ್ನನ್ನು ತಾಲ್ಲೂಕಿನ ಜನ ಬೆಳೆಸಿದ್ದಾರೆ’ ಎಂದು ಹೇಳಿದರು.

ಮಾಲೂರು ತಾಲ್ಲೂಕಿನ ಜನ ತುಂಬಾ ಸೂಕ್ಷ್ಮ ಸ್ವಭಾವದವರು. ತುಂಬಾ ತೂಕ ಹಾಕುತ್ತಾರೆ. ಯಾರು ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಿರುತ್ತಾರೆ. 2028ರ ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನೂ ನೋಡಲಿ. ಜನ ಯಾವ ರೀತಿ ತೀರ್ಮಾನ ಮಾಡುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಸವಾಲು ಹಾಕಿದರು.

ಸುಪ್ರೀಂ ಕೋರ್ಟ್ ತೀರ್ಮಾನ ಸಮಾಧಾನ ಉಂಟು ಮಾಡಿದೆ. ಆದಷ್ಟು ಬೇಗನೇ ಮರು ಎಣಿಕೆ ನಡೆಯಬೇಕೆನ್ನುವುದು ನನ್ನ ಆಸೆ. ಚುನಾವಣಾ ಆಯುಕ್ತರು, ಜಿಲ್ಲಾ ಆಡಳಿತ ಈ ಸಂಬಂಧ ಬೇಗನೇ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

2023ರ ವಿಧಾನಸಭೆ ಚುನಾವಣೆ ಮತ ಎಣಿಕೆ ವೇಳೆ ರಾಜ್ಯದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ನಾನು 248 ವೋಟುಗಳಲ್ಲಿ ಗೆದ್ದಿದ್ದೆ. ಮರು ಮತ ಎಣಿಕೆಗೆ ನಾನು ಯಾವತ್ತೂ ವಿರೋಧ ಮಾಡಿಲ್ಲ. ಅವರು ನ್ಯಾಯಾಲಯಕ್ಕೆ ಹೋಗಿದ್ದಕ್ಕೆ ನಾನು ಹೋದೆ. ಮರು ಮತ ಎಣಿಕೆಗೆ ಸೂಚಿಸಿದರೆ ನಾನು ಮೇಲ್ಮನವಿ ಮಾಡುವುದಿಲ್ಲವೆಂದು ಹಿಂದೆಯೇ ಹೇಳಿದ್ದೆ. ಆದರೆ, ಅಸಿಂಧುಗೊಳಿಸಿದ ಕಾರಣ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ. ಸುಪ್ರೀಂ ಕೋರ್ಟಿನಲ್ಲಿ ನಾನಂದುಕೊಂಡಂತೆ ಆಯಿತು. ನ್ಯಾಯದೇವತೆ ಕೈಬಿಡಲಿಲ್ಲ. ನಾಲ್ಕು ವಾರದಲ್ಲಿಯೇ ಮತ ಎಣಿಕೆ ನಡೆಯಬೇಕೆಂದೇನೂ ಸುಪ್ರೀಂ ಕೋರ್ಟ್ ಹೇಳಿಲ್ಲ. ಬೇಗ ನಡೆಯಲಿ ಎಂಬುದು ನನ್ನ ಆಸೆ. ಎಣಿಕೆ ಸಂಬಂಧ ನನಗೆ ಯಾವುದೇ ಅನುಮಾನ ಇಲ್ಲ. ಮತ್ತೆ ನಾನೇ ಗೆಲ್ಲುತ್ತೇನೆ ಎಂದರು.

ಬೇಗನೇ ಮರು ಮತ ಎಣಿಕೆ ನಡೆಯಲಿ–ಶಾಸಕ ಮಾಲೂರು ತಾಲ್ಲೂಕಿನ ಜನ ತುಂಬಾ ಸೂಕ್ಷ್ಮ ಸ್ವಭಾವದವರು ಮಂಜುನಾಥ್ ಗೌಡರಿಂದ ನನ್ನ ಕುಟುಂಬ ತುಂಬಾ ನೋವು ಅನುಭವಿಸಿದೆ: ನಂಜೇಗೌಡ

ಮರು ಮತ ಎಣಿಕೆ ಬಳಿಕ ಮಂಜುನಾಥ್ ಗೌಡ ಬಳಿ ಈಗಿರುವ ಅರ್ಧ ಜನರೂ ಇರಲ್ಲ. ಮತ ಎಣಿಕೆ ನಡೆದು ತಾನು ಗೆಲ್ಲುತ್ತೇನೆ ಎಂದು ಹೇಳಿ ಕೆಲವರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ ಅಷ್ಟೆ
ಕೆ.ವೈ.ನಂಜೇಗೌಡ ಶಾಸಕ

‘ಮುನಿಸ್ವಾಮಿ ನೆರವಿನಿಂದ ಇ.ಡಿ ದಾಳಿ’

‘ನಮ್ಮ ಸ್ನೇಹಿತ ಸಂಸದರಾಗಿದ್ದ ಎಸ್.ಮುನಿಸ್ವಾಮಿ ಸಹಕಾರ ಪಡೆದು ನನ್ನ ಮೇಲೆ ಇ.ಡಿ ದಾಳಿ ಮಾಡಿಸಿದರು. ಈಗ ಮರು ಮತ ಎಣಿಕೆ ಎಂದು ಹೋರಾಟ ನಡೆಸಬೇಕಾಗಿದೆ. ಸುಪ್ರೀಂ ಕೋರ್ಟ್ಗೆ ಹೋಗಬೇಕಾಯಿತು. ಇದೆಲ್ಲ ನೋಡಿದಾಗ ಮಾಲೂರು ತಾಲ್ಲೂಕಿನ ಇತಿಹಾಸದಲ್ಲಿ ಮೊದಲ ಬಾರಿ ಇಂಥ ಘಟನೆಗಳು ನಡೆಯುತ್ತಿವೆ’ ಎಂದು ನಂಜೇಗೌಡ ಬೇಸರ ವ್ಯಕ್ತಪಡಿಸಿದರು. ‘ನಾನು ಎರಡನೇ ಅವಧಿಗೆ ಶಾಸಕ ಆಗಿದ್ದೀನಿ. ವೈಯಕ್ತಿಕವಾಗಿ ಒಬ್ಬರಿಗೂ ತೊಂದರೆ ಕೊಟ್ಟಿಲ್ಲ. ಈಗಿನ ಘಟನೆ ನೋಡುತ್ತಿದ್ದರೆ ತುಂಬಾ ನೋವು ಬೇಸರ ಆಗುತ್ತಿದೆ. ತಾಲ್ಲೂಕಿನ ಜನ ಕೂಡ ನೋಡುತ್ತಿದ್ದಾರೆ’ ಎಂದು ಅವರು ಮಂಜುನಾಥ್ ಗೌಡ ವಿರುದ್ಧ ಹರಿಹಾಯ್ದರು.

ಹೊಸಕೋಟೆಯಿಂದ ಕರೆದು ತಪ್ಪು ಮಾಡಿದೆ ‘ಸಂಬಂಧ ಇಲ್ಲದ ಮಂಜುನಾಥ್ ಗೌಡರನ್ನು ಹೊಸಕೋಟೆಯಿಂದ ಮಾಲೂರಿಗೆ ಕರೆತಂದು ಶಾಸಕನನ್ನಾಗಿ ಮಾಡಿ ತಪ್ಪು ಎಸಗಿದ್ದು ಈಗ ಅನುಭವಿಸಬೇಕಾಗಿದೆ. ಕರೆತಂದಿದ್ದು ನಾನಲ್ಲ ಎಂದು ಅವರು ಹೇಳಬಹುದು. ಅದನ್ನು ದೇವರು ನೋಡಿಕೊಳ್ಳಲಿ. ಅವರದ್ದು ಚಿಕ್ಕ ವಯಸ್ಸು ಗೌರವಯುತವಾಗಿದ್ದಿದ್ದರೆ ಇನ್ನೂ ನಾಲ್ಕರಿಂದ ಐದು ಬಾರಿ ಶಾಸಕರಾಅಗಬಹುದಿತ್ತು’ ಎಂದರು. ‘ಅಕ್ರಮ ಗಣಿಗಾರಿಕೆ ಎಂದು ನನ್ನ ಮೇಲೆ ₹ 120 ಕೋಟಿ ದಂಡ ಹಾಕಿಸಿದರು. ಆಮೇಲೆ ಒಂದೂವರೆ ವರ್ಷ ನನ್ನ ವ್ಯವಹಾರ ನನ್ನ ಫ್ಯಾಕ್ಟರಿ ಬಂದ್ ಮಾಡಿಸಿದರು. ನಾನು ನನ್ನ ಕುಟುಂಬ ತುಂಬಾ ನೋವು ಅನುಭವಿಸಿದೆವು. ನಂತರ ನ್ಯಾಯಾಲಯದಲ್ಲಿ ಪ್ರಶ್ನಿಸಿ ಒಂದು ಬಾರಿ ಸೆಟ್ಲ್ಮೆಂಟ್ ಎಂಬಂತೆ ₹ 12 ಕೋಟಿ ಪಾವತಿಸಿ ಫ್ಯಾಕ್ಟರಿ ಚಟುವಟಿಕೆ ಮುಂದುವರಿಸಿದೆವು. ಬಳಿಕ ಸಿಐಡಿಗೆ ಕೊಡಿಸಲಾಯಿತು. ತುಂಬಾ ನಾವು ತಿಂದೆವು. ನಂತರ ಐಟಿ ಕರೆ ತರಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು. ದರಖಾಸ್ತು ಸಮಿತಿಯಲ್ಲಿ ನಾನು ಯಾರಿಗೂ ಒಂದು ಎಕರೆ ಕೂಡ ಮೋಸದಿಂದ ಕೊಟ್ಟಿಲ್ಲ. ಬಿಜೆಪಿ ಸರ್ಕಾರದಲ್ಲಿ ನನ್ನ ಮೇಲೆ ಎಫ್ಐಆರ್ ಹಾಕಿಸಿ ತೊಂದರೆ ಕೊಟ್ಟರು ಎಂದರು.

ನನ್ನನ್ನು ರಾಷ್ಟ್ರೀಯ ಡಾರ್ಲಿಂಗ್ ಮಾಡಿದರು! ‘ನಾನು ಮಂಜುನಾಥ್ ಗೌಡರನ್ನು ಶಾಸಕನ್ನಾಗಿ ಮಾಡಿದೆ. ಅವರು ನನ್ನನ್ನು ನ್ಯಾಷನಲ್ ಫಿಗರ್ ಮಾಡಿ ಬಿಟ್ಟರು. ಮರು ಮತ ಎಣಿಕೆ ಪ್ರಕರಣ ಸಂಬಂಧ ಯಾರಪ್ಪ ನಂಜೇಗೌಡ ಯಾವನಪ್ಪ ನಂಜೇಗೌಡ ಎನ್ನುತ್ತಿದ್ದಾರೆ. ಇ.ಡಿ ದಾಳಿ ನಡೆದಾಗಲೂ ದೊಡ್ಡ ಪ್ರಚಾರ ಆಗಿತ್ತು. ಇಂಗ್ಲಿಷ್ ಟಿ.ವಿ ವಾಹಿನಿಗಳಲ್ಲೂ ನನ್ನ ಬಗ್ಗೆ ಬರುತ್ತಿದೆ. ಅಮೆರಿಕದಿಂದ ಫೋನ್ ಮಾಡಿದ್ದರು’ ಎಂದು ನಂಜೇಗೌಡ ಹೇಳಿದರು.