ಚಿಕ್ಕಬಳ್ಳಾಪುರದಲ್ಲಿ ನಡೆದ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆ ಸಮಾರಂಭದ ಆಹ್ವಾನ ಪತ್ರಿಕೆ
ಅಂದೇ ಪ್ರತಿಭಟಿಸಿದ್ದ ನಮ್ಮನ್ನು ಬಂಧಿಸಿದ್ದರು ಎತ್ತಿನಹೊಳೆ ಯೋಜನೆ ಕಾರ್ಯಸಾಧುವಲ್ಲವೆಂದು ಒಂದು ಹನಿಯೂ ನೀರು ಬರಲ್ಲವೆಂದು 2014ರ ಮಾರ್ಚ್ 3ರ ಶಂಕುಸ್ಥಾಪನೆಯ ದಿನವೇ ನಾವು ಪ್ರತಿಭಟನೆ ನಡೆಸಿದ್ದೆವು. ಹಲವಾರು ಲೋಪದೋಷಗಳಿಂದ ಕೂಡಿದ ಯೋಜನೆ ಎಂದು ಹೇಳಿದ್ದವು. ಆಗ ಪೊಲೀಸರು ಸುಮಾರು 500 ಜನರನ್ನು ಬಂಧಿಸಿದ್ದರು. 2 ವರ್ಷಗಳಲ್ಲಿ ನೀರು ಹರಿಸುವುದಾಗಿ ಅಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಈಗ ನೋಡಿದರೆ 12 ವರ್ಷವಾದರೂ ನೀರು ಬರಲಿಲ್ಲ. ಈಗ ಅದೇ ಸರ್ಕಾರ ಯೋಜನೆ ಬಗ್ಗೆ ಉಲ್ಟಾ ಹೊಡೆಯುತ್ತಿದೆ. ಯೋಜನೆಯಲ್ಲಿ ಭ್ರಷ್ಟಾಚಾರ ಲೋಪವಾಗಿರುವ ಬಗ್ಗೆ ಸಿಎಜಿ ವರದಿಯೇ ಹೇಳಿದೆ. ಆದರೂ ಎರಡೂ ಜಿಲ್ಲೆಗಳು ಜನಪ್ರತಿನಿಧಿಗಳು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಜನರು ಕೂಡ ಜನಪ್ರತಿನಿಧಿಗಳ ಬುರುಡೆ ಮಾತು ಕೇಳಿರುವುದು ನೋವುಂಟು ಮಾಡಿದೆ
ಆರ್.ಆಂಜನೇಯರೆಡ್ಡಿ ಅಧ್ಯಕ್ಷ ಶಾಶ್ವತ ನೀರಾವರಿ ಹೋರಾಟ ಸಮಿತಿ