ಕೋಲಾರ: ನಗರದ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಪ್ರಮುಖ ರಸ್ತೆಗಳೂ ಸೇರಿದಂತೆ ನಗರದ ಎಲ್ಲೆಡೆ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 121ನೇ ಜಯಂತಿ ಸಂಭ್ರಮ ಮೈದಾಳಿತ್ತು. ನೂರಾರು ವಿದ್ಯಾರ್ಥಿಗಳು, ಯುವಕ-ಯುವತಿ ಸಂಘಗಳ ಸದಸ್ಯರು, ಗಣ್ಯರು, ಅಧಿಕಾರಿಗಳು, ಜನಸಾಮಾನ್ಯರು ಸೇರಿದಂತೆ ಬಹುತೇಕರು ಜಯಂತಿಯಲ್ಲಿ ಪಾಲ್ಗೊಂಡರು.

ಅಂಬೇಡ್ಕರ್ ಪ್ರತಿಪಾದಿಸಿದ್ದ ಸಮಾನತೆಯ ಆಶಯ ಇನ್ನಾದರೂ ಈಡೇರಬೇಕು ಎಂಬ ಒಕ್ಕೊರಲಿನ ಆಗ್ರಹವೂ ಇದೇ ಸಂದರ್ಭದಲ್ಲಿ ಮೂಡಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಅಂಬೇಡ್ಕರ್ ಅವರ 66 ಸ್ತಬ್ಧ ಚಿತ್ರಗಳ ಮೆರವಣಿಗೆಯು ಅದ್ಧೂರಿತನದಿಂದ ಗಮನ ಸೆಳೆಯಿತು.

ಜಿಲ್ಲಾಡಳಿತ: ನಗರದ ಬಂಗಾರಪೇಟೆ ವೃತ್ತದಲ್ಲಿ ಜಿಲ್ಲಾಡಳಿತದ ಪರವಾಗಿ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಡಿ.ವಿ.ಹರೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ನಗರಸಭೆ ಅಧ್ಯಕ್ಷೆ ನಾಜಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ಉಪವಿಭಾಗಾಧಿಕಾರಿ ಆಯಿಷಾ ಪರ್ವೀನ್, ತಹಶೀಲ್ದಾರ್ ಮುನಿವೀರಪ್ಪ ಉಪಸ್ಥಿತರಿದ್ದರು.

ಸಂಯುಕ್ತ ರಂಗ: ನಂತರ, ವೃತ್ತದಲ್ಲಿ ದಲಿತ ಸಂಘಟನೆಗಳ ಸಂಯುಕ್ತ ರಂಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲ ಗಣ್ಯರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ವರ್ತೂರು ಪ್ರಕಾಶ್, ಅಂಬೇಡ್ಕರರು ಪ್ರತಿಪಾದಿಸಿದ್ದ ಸಮಾನತೆ, ಸಾಮಾಜಿಕ ನ್ಯಾಯದ ಆಶಯಗಳು ಈಡೇರಬೇಕಾಗಿವೆ ಎಂದು ಅಭಿಪ್ರಾಯಪಟ್ಟರು. ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ನಾರಾಯಣಸ್ವಾಮಿ, ವಿಜಯಕುಮಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ನಚಿಕೇತ ನಿಲಯ: ನಚಿಕೇತ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೂ ಸಚಿವ ವರ್ತೂರು ಪ್ರಕಾಶ್ ಮಾಲಾರ್ಪಣೆ ಮಾಡಿದರು. ದಲಿತ ಸಂಘರ್ಷ ಸಮಿತಿಯ ವಕ್ಕಲೇರಿ ರಾಜಪ್ಪ, ನಗರಸಭೆ ಸದಸ್ಯರಾದ ವಿ.ಕೆ.ರಾಜೇಶ್, ವಿ.ಪ್ರಕಾಶ್, ವರದೇನಹಳ್ಳಿ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಇಲ್ಲಿಯೂ ಉಪಸ್ಥಿತರಿದ್ದರು. ವಿದ್ಯಾರ್ಥಿನಿಲಯದ ಆವರಣದಲ್ಲಿ ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ಜಯಂತಿಯನ್ನು ಆಚರಿಸಿದರು.

ರೈತ ಸಮಿತಿ: ಕರ್ನಾಟಕ ರೈತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಎಂ.ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ಗಣೇಶ್, ಸಾಯಿನಾಥ್ ಮತ್ತು ಲಕ್ಷ್ಮೀಪತಿ ಕಾರ್ಯಕ್ರಮ ಉದ್ಘಾಟಿಸಿದರು.

ಸಮಿತಿ ಮುಖಂಡರಾದ ಬೆಗ್ಲಿ ರಾಮಚಂದ್ರೇಗೌಡ, ಯಾನಾದಹಳ್ಳಿ ಚಂದ್ರಶೇಖರ್, ಚಾಂದ್ಪಾಷ, ಗಂಧರ್ವ ಕೃಷ್ಣ, ವಿಟ್ಟಪ್ಪನಹಳ್ಳಿ ಗ್ರಾಮ ಪಂಚಾಯಿತಿ. ಸದಸ್ಯರಾದ ನಾರಾಯಣಸ್ವಾಮಿ, ಅಕ್ರಂ, ತಬ್ರೇಜ್, ನವೀನ್ಕುಮಾರ್, ಕೃಷ್ಣ, ಶಂಕರ್, ಮಂಜುನಾಥ್, ಶ್ರೀನಾಥ್, ದೋಬಿ ಶಂಕರ್ ಪಾಲ್ಗೊಂಡಿದ್ದರು.

ಸಮೈಖ್ಯ ಕಾಲೇಜು: ನಗರದ ಹೊರವಲಯದ ಸಮೈಖ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸಿ.ವಿ.ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಎಂ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಡಿಜಿಎಂಪಿ ಸಂಸ್ಥೆ ಅಧ್ಯಕ್ಷ ಡಿ.ಆರ್.ನಾಗರಾಜಗೌಡ ಉಪಸ್ಥಿತರಿದ್ದರು. ಉಪನ್ಯಾಸಕಿ ಎಚ್.ಆರ್.ಪದ್ಮಾ ನಿರೂಪಿಸಿದರು. ಆಂಥೋನಿ ಸ್ವಾಗತಿಸಿದರು. ಅಂಜಲಿದೇವಿ ವಂದಿಸಿದರು.

ದುರ್ಬಲರ ತಲುಪದ ಸೌಲಭ್ಯ

ಮಾಲೂರು: ಸರ್ಕಾರದ ಅನುದಾನ ಪ್ರಬಲ ದಲಿತ ಕುಟುಂಬಗಳಿಗೆ ಮಾತ್ರ ತಲುಪುತ್ತಿದ್ದು, ದುರ್ಬಲ ದಲಿತ ಕುಟುಂಬಗಳ ಬಳಿ ಸುಳಿಯುತ್ತಿಲ್ಲ ಎಂದು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 121ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಸೌಲಭ್ಯ ಎಲ್ಲ ದಲಿತರಿಗೂ ತಲುಪಬೇಕು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ದಲಿತ ಮುಖಂಡರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಚೆಕ್ ಹಾಗೂ ಕೃಷಿ ಉಪಕರಣ ವಿತರಿಸಲಾಯಿತು.

ತಹಶೀಲ್ದಾರ್ ಎಚ್.ಅಮರೇಶ್, ತಾ.ಪಂ.ಅಧ್ಯಕ್ಷ ಕೆ.ಗೋಪಾಲಗೌಡ, ಸದಸ್ಯ ಎಸ್.ವಿ.ಲೋಕೇಶ್, ಇಒ ರಜನೀಕಾಂತ್ಮಲ್ಲಿ, ಬಿಇಒ ವೆಂಕಟರಾಮರೆಡ್ಡಿ, ಸಮಾಜ ಕಲ್ಯಾಣ ಅಧಿಕಾರಿ ಮೀನಾಕುಮಾರಿ, ಪುರಸಭೆ ಅಧ್ಯಕ್ಷೆ ಗುಲಾಬ್ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ತಾ.ಪಂ.ಉಪಾಧ್ಯಕ್ಷೆ ಅಮರಾವತಿ, ಜಿ.ಪಂ.ಸದಸ್ಯರಾದ ಯಲ್ಲಮ್ಮ, ರಾಮಸ್ವಾಮಿರೆಡ್ಡಿ, ಯಶೋಧಮ್ಮ, ಎಪಿಎಂಸಿ ಅಧ್ಯಕ್ಷ ಬೀರೇಗೌಡ, ಉಪಾಧ್ಯಕ್ಷ ಎಂ.ವಿ.ನಂಜುಂಡಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಎಂ.ನಾರಾಯಣಗೌಡ, ಮುಖಂಡರಾದ ಡಾ.ಬಂಡೂರು ನಾರಾಯಣಸ್ವಾಮಿ, ಹನುಮಪ್ಪ, ವೆಂಕಟರಾಮ್ ಉಪಸ್ಥಿತರಿದ್ದರು.

ತಾಲ್ಲೂಕು ಕಾಂಗ್ರೆಸ್ ಸಮಿತಿ, ವಕೀಲರ ಸಂಘ, ಜೆಡಿಎಸ್ ತಾಲ್ಲೂಕು ಘಟಕ, ಹಸಿರು ರೈತಸೇನೆ, ಕನ್ನಡ ಪರ ಸಂಘಟನೆ, ದಲಿತ ಪರ ಸಂಘಟನೆಗಳಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಅಂಬೇಡ್ಕರ್ ನೊಂದವರ ಧ್ವನಿ

ಮುಳಬಾಗಲು: ದಲಿತ ಜನಾಂಗಕ್ಕೆ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ನಾಯಕರಾಗಿರಲಿಲ್ಲ. ತುಳಿತಕ್ಕೆ ಒಳಗಾದ ಎಲ್ಲ ಜನ ಸಮುದಾಯಗಳಿಗೆ ಹಾಗೂ ರಾಷ್ಟ್ರ ಕಂಡ ಜನನಾಯಕರಾಗಿ ಪರಿಚಿತರಾಗಿದ್ದರು ಎಂದು ನಿವೃತ್ತ ಉಪನ್ಯಾಸಕ ಎಂ.ನಾರಾಯಣಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಮ್ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಬುದ್ದ, ಬಸವಣ್ಣನವರಂತೆ ದೇಶದಲ್ಲಿ ಸಾಮಾಜಿಕ ಕಾಂತ್ರಿಯ ಹರಿಕಾರರಾಗಿ ಅಂಬೇಡ್ಕರ್ ಭಾರತೀಯ ಸಮಾಜಕ್ಕೆ ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದರು.

ಶಾಸಕ ಅಮರೇಶ್ ಕಾರ್ಯಕ್ರಮ ಉದ್ಫಾಟಿಸಿದರು. ತಹಶೀಲ್ದಾರ್ ಪಿ.ಜಯಮಾಧವ, ತಾ.ಪಂ.ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಮಾಜಿ ಸದಸ್ಯ ಉತ್ತನೂರು ಶ್ರೀನಿವಾಸ್, ತಾಲ್ಲೂಕು ಕುರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ವೆಂಕಟೇಶಗೌಡ, ಪುರಸಭೆ ಮಾಜಿ ಅಧ್ಯಕ್ಷ ಮುನಿರಾಜು, ತಾ.ಪಂ.ಅಧಿಕಾರಿ ಡಾ.ವೆಂಕಟಸ್ವಾಮಿ, ಮುಖಂಡರಾದ ತಿಪ್ಪಣ್ಣ, ಅಮರನಾಥ್ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಪ್ರಸಾದ್, ಉಪಾಧ್ಯಾಯ ಅಲಂಗೂರು ಮಂಜುನಾಥ್, ಪುರಸಭೆ ಆರೋಗ್ಯಾಧಿಕಾರಿ ತಾಯಲೂರು ನಾಗರಾಜ್ ಹಾಗೂ ಇತರರು ಭಾಗವಹಿಸಿದ್ದರು.

ಭವನ ನಿರ್ಮಾಣ: ಭರವಸೆ

ಶ್ರೀನಿವಾಸಪುರ: ಪಟ್ಟಣದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು ಹಾಗೂ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀನರಾಮ್ ಅವರು ನಿತ್ಯ ಸ್ಮರಣೀಯರು.

ಅವರ ದೂರಾಲೋಚನೆಯ ಫಲವಾಗಿ ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದೆ. ಅಂಬೇಡ್ಕರ್ ಶ್ರಮದ ಫಲವಾಗಿ ದೇಶ ಅತ್ಯುತ್ತಮ ಸಂವಿಧಾನ ಪಡೆಯಲು ಸಾಧ್ಯವಾಯಿತು. ಆದ್ದರಿಂದಲೇ ಅವರು ಸಮಾಜದ ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ವಕೀಲ ಕೆ. ಶಿವಪ್ಪ, ಡಿವೈಎಸ್ಪಿ ಗೋವಿಂದಯ್ಯ ಮಾತನಾಡಿದರು. ತಹಶೀಲ್ದಾರ್ ಚಿನ್ನನ್ನ, ತಾ.ಪಂ. ಇಒ ಎಸ್.ಟಿ.ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್ ಖಲೀಲ್, ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್, ಜಿ.ಪಂ.ಸದಸ್ಯರಾದ ಆರ್.ನಾರಾಯಣಸ್ವಾಮಿ, ಜಿ.ಕೆ.ನಾಗರಾಜ್, ರತ್ನಮ್ಮ ಗಣೇಶ್, ಬಿ.ಜಿ.ಸೈಯದ್ ಖಾದರ್, ಪುರಸಭೆ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ, ಮುಖ್ಯಾಧಿಕಾರಿ ಕೆ.ಜಗದೀಶ್ ಉಪಸ್ಥಿತರಿದ್ದರು.
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜನಪದ ಕಲಾ ಪ್ರದರ್ಶನ

ಬಂಗಾರಪೇಟೆ: ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಆಡಳಿತ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಇಲಾಖೆಗಳ ಮೂವತ್ತಕ್ಕು ಹೆಚ್ಚು ಅಂಬೇಡ್ಕರ್ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ಜನಪದ ಕಲಾ ಪ್ರದರ್ಶನವು ಬಹುಮುಖ್ಯ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ.ನಾರಾಯಣಸ್ವಾಮಿ, ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಸೇರಿದ ವ್ಯಕ್ತಿ ಅಲ್ಲ, ಅಖಂಡ ಭಾರತ ದೇಶದ ನೇತಾರ ಎಂದರು. ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಖ್ಯ ಭಾಷಣಕಾರ ರಾಮಕೃಷ್ಣಪ್ಪ, ಅಂಬೇಡ್ಕರ್ ಜೀವನ ಚರಿತ್ರೆ ವಿವರಿಸಿದರು. ತಹಶೀಲ್ದಾರ್ ಎಸ್.ಎಂ.ಮಂಗಳಾ ಮಾತನಾಡಿದರು. ಅಂಬೇಡ್ಕರ್ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು ಹಾಗೂ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೂವರಸನಹಳ್ಳಿ ರಾಜಪ್ಪ ಮತ್ತು ಸೂಲಿಕುಂಟೆ ರಮೇಶ್ ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಪುರಸಭೆ ಅಧ್ಯಕ್ಷ ಚಂದ್ರಾರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.