ಕೆಜಿಎಫ್: ಹನ್ನೊಂದು ವರ್ಷದ ಈ ಪುಟ್ಟ ಬಾಲಕಿಗೆ ಅಪ್ಪ ಅಮ್ಮನ ನೆನಪು ಅಸ್ಪಷ್ಟ. ಇಬ್ಬರೂ ಇಹಲೋಕಕ್ಕೆ ತೆರಳಿದ ಮೇಲೆ ಪಕ್ಕದ ಮನೆಯ ಪರಿಚಿತರ ಮನೆಯಲ್ಲಿ ವಾಸ. ವಿದ್ಯಾಭ್ಯಾಸ ಬದಲು ಮನೆ ಕೆಲಸವೇ ಮುಖ್ಯ ಕಾಯಕ. ಮುಗ್ದ ಬಾಲಕಿಗೆ ಮನೆ ಮಾಲೀಕರು ಕೊಟ್ಟ ಚಿತ್ರ ಹಿಂಸೆ ಬಾಲಕಿಯನ್ನು ನೋಡಿದ ಎಂತಹವರ ಮನಸ್ಸಿನಲ್ಲಿಯೂ ಕಣ್ಣೀರು ಬರಿಸದೇ ಇರದು.

ಈ ಪುಟ್ಟ ಬಾಲಕಿ ಹೆಸರು ನಂದಿನಿ. ಬಂಧುಬಳಗ ಮತ್ತು ಸಾಕಿದವರಿಂದಲೂ ದೂರವಾಗಿರುವ ಆಕೆ ಈಗ ನಗರದ ಮಕ್ಕಳ ಕಲ್ಯಾಣ ಕೇಂದ್ರದ ಬಾಲ ಮಂದಿರದಲ್ಲಿ ತನ್ನಂತೆ ಇರುವ ನತದೃಷ್ಟರೊಂದಿಗೆ ಇದ್ದಾಳೆ. ತಾನಿದ್ದ ಮನೆ ಹಾಗೂ ಸಾಕುತ್ತಿದ್ದವರ ನಿಖರ ವಿಳಾಸ ತಿಳಿಸದ ಕಾರಣ ಅಧಿಕಾರಿಗಳಲ್ಲಿ ಗೊಂದಲ ಮೂಡಿದೆ.

ಒಂದು ವಾರದ ಹಿಂದೆ ನಗರದಲ್ಲಿ ಗಾರ್ಮೆಂಟ್ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಮೂವರು ಯುವತಿಯರ ಬಳಿ ಬಂದ ನಂದಿನಿ, ಹೊಟ್ಟೆ ಹಸಿವಿಗೆ ಹತ್ತು ರೂಪಾಯಿ ಕೊಡುವಂತೆ ಕೇಳಿದ್ದಾಳೆ. ಆಸಕ್ತಿಯಿಂದ ಬಾಲಕಿಯ ವೃತ್ತಾಂತ ಕೇಳಿದ ಗಾರ್ಮೆಂಟ್ ಕೆಲಸಗಾರರಾದ ಕವಿತಾ, ಇಂದಿರಾ ಮತ್ತು ಕಲೈಸೆಲ್ವಿ ತಮಗೆ ಪರಿಚಿತರಿದ್ದ ಚರ್ಚ್ ಪಾಸ್ಟರ್ ರವಿಚಂದ್ರ ಎಂಬುವರ ಬಳಿ ಬಾಲಕಿಯನ್ನು ಬಿಟ್ಟು ನೋಡಿಕೊಳ್ಳುವಂತೆ ಹೇಳಿ ತೆರಳಿದ್ದಾರೆ.

ಸುಮಾರು ಒಂದು ವಾರ ಬಾಲಕಿ ಯನ್ನು ನೋಡಿಕೊಂಡ ರವಿಚಂದ್ರ ಬಾಲಕಿಯ ವಿಳಾಸವನ್ನು ಪತ್ತೆ ಹಚ್ಚುವ ಕೆಲಸ ಮಾಡಿ ಸೋತರು. ನಂತರ ಸ್ವಯಂಸೇವಾ ಸಂಸ್ಥೆ ಸಿಕ್ರೆಂ ಸಹಾಯ ಪಡೆದು ಬಾಲಕಿಯ ವೃತ್ತಾಂತ ವನ್ನು ಬಹಿರಂಗಗೊಳಿಸಿದರು.

ಸ್ವಯಂಸೇವಾ ಸಂಸ್ಥೆಯಿಂದ ಮೌಖಿಕ ದೂರು ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಬಾಲಕಿಯ ಬಗ್ಗೆ ವಿವರ ವಾದ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದರು. ಮಕ್ಕಳ ಕಲ್ಯಾಣ ಕೇಂದ್ರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಸಿಬ್ಬಂದಿ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರಿಶೀಲನೆಗೆ ಒಳಪಡಿಸಿದಾಗ ಆತಂಕಕಾರಿ ವಿಷಯಗಳು ಹೊರಗೆ ಬಂದವು.

ಬಾಲಕಿಯ ಎರಡೂ ಪೃಷ್ಠದ ಮೇಲೆ ಬಿಸಿ ಚಾಕುವಿನಿಂದ ಬರೆ ಇಟ್ಟ ಗುರುತುಗಳು ಇದ್ದವು. ಅದೇ ರೀತಿ ಗುಪ್ತಾಂಗದ ಬಳಿಯೂ ಬರೆ ಗುರುತು ಕಾಣಿ ಸಿದವು. ತಲೆಯ ಮಧ್ಯ ಭಾಗದಲ್ಲಿ ಏಟು ತಿಂದ ಗುರುತುಗಳು ಕಂಡು ಬಂದವು. ಕಾರಣವೇನೆಂದು ವಿಚಾರಣೆ ನಡೆಸಿದಾಗ ಬಾಲಕಿಯ ಮೇಲೆ ನಡೆದ ಕ್ರೌರ್ಯದ ಅನಾವರಣವಾಯಿತು.

`ಅಪ್ಪ ಅಮ್ಮ ಇಬ್ಬರೂ ತೀರಿಕೊಂಡರು. ನಂತರ ಪಕ್ಕದ ಮನೆಯಲ್ಲಿಯೇ ವಾಸ ಪ್ರಾರಂಭವಾಯಿತು. ಮನೆಯಲ್ಲಿ ತನಗಾಗಿ ಇಟ್ಟಿದ್ದ ಒಡವೆ, ಮನೆ ಸಾಮಾನುಗಳು ಪಕ್ಕದ ಮನೆಯವರ ವಶವಾಯಿತು. ತಮ್ಮ ಮನೆಯನ್ನು ಶೌಚಾಲಯವನ್ನಾಗಿ ಪರಿವರ್ತಿಸಲಾಯಿತು. ಇಡೀ ದಿನ ಕೆಲಸ. ಕೆಲಸ ತಪ್ಪಿದರೆ ಹೊಡೆತ ಖಂಡಿತ~ ಎಂದು ತನ್ನದೇ ಭಾಷೆಯಲ್ಲಿ ವಿವರಿಸುತ್ತಿದ್ದ ಆಕೆಯ ಮಾತುಗಳನ್ನು ಕೇಳುತ್ತಿದ್ದ ಸುತ್ತಮುತ್ತಲಿನವರ ಕಣ್ಣುಗಳು ತೇವವಾದವು.

ನಂತರ ಪೊಲೀಸರು ಸಹ ಬಾಲಕಿಯ ವಿಳಾಸ ಪತ್ತೆ ಹಚ್ಚುವ ಕೆಲಸ ಆರಂಭಿಸಿದರು. ಆಕೆ ಹೇಳಿದ ಕಡೆಯೆಲ್ಲಾ ಹೋದರು. ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಮನೆಗಳನ್ನು ಆಕೆ ತೋರಿಸಿದ ಮೇಲೆ ವಿಚಾರಣೆ ನಡೆಸಿದ ಪೊಲೀಸರು ವಿಳಾಸ ತಪ್ಪು ಎಂಬ ನಿರ್ಧಾರಕ್ಕೆ ಬಂದರು.

`ನಂದಿನಿ ತೊಂದರೆಗೊಳಗಾದ ಬಾಲಕಿಯಾಗಿದ್ದಾಳೆ. ಅವಳ ವಿಳಾಸವನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗುತ್ತಿಲ್ಲ. ವಿಳಾಸ ಪತ್ತೆ ಹಚ್ಚಿದ ನಂತರವಷ್ಟೇ ಆಕೆಯ ಮೇಲೆ ದೌರ್ಜನ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ. ಸದ್ಯಕ್ಕೆ ನಂದಿನಿ ಬಾಲಮಂದಿರದಲ್ಲಿಯೇ ಇರುತ್ತಾಳೆ~ ಎಂದು ಮಕ್ಕಳ ಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಲೈಸೆಲ್ವಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.