ಮಂಗಳವಾರ, ಸೆಪ್ಟೆಂಬರ್ 27, 2022
27 °C
140 ಜನರಿಗೆ ಉದ್ಯೋಗ ಪರಿಕರಗಳ ವಿತರಣೆ

ಸರ್ಕಾರದ ಸೌಲಭ್ಯ ಸದುಪಯೋಗ ಪಡೆಯಿರಿ: ಮಾಜಿ ಸಂಸದ ಶಿವರಾಮನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಹಿಂದುಳಿದ ಭಾಗ ಎಂಬ ಹಣೆಪಟ್ಟಿಯನ್ನು ತೊಲಗಿಸಿ, ಅಭಿವೃದ್ಧಿ ಮಾಡಲು ಎಂದೇ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ರಚಿಸಲಾಗಿದೆ ಎಂದು ಮಾಜಿ ಸಂಸದ ಶಿವರಾಮನಗೌಡ ಹೇಳಿದರು.

ಅವರು ನಗರದ ಲಯನ್ಸ್ ಕ್ಲಬ್ ಐಎಎಂ ಹಾಲ್‌ನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ಮಹಿಳೆ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ಆಯೋಜಿಸಲಾಗಿದ್ದ ಕೋವಿಡ್ ಪ್ರಯುಕ್ತ ಬದುಕಿಗೊಂದು ಆಸರೆಯಾಗಿ ಉದ್ಯೋಗ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂಘಟನೆಯ ರಚನೆ ಮುಖ್ಯಮಂತ್ರಿ ಯಡಿಯೂರಪ್ಪನವರ ಆಶಯ. ವಿವಿಧ ಯೋಜನೆಗಳನ್ನು ರಚಿಸಿ ಅವುಗಳ ಮೂಲಕ ಹಿಂದುಳಿ ಭಾಗದ ಅಭಿವೃದ್ಧಿಗೆ ನಾಂದಿ ಹಾಕಿದ್ದಾರೆ. ಇದರಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಾಂಸ್ಕೃತಿಕ, ಶಿಕ್ಷಣ ಸೇರಿ ಇತರೆ ಕೇತ್ರಗಳಿಗೆ ಸಂಬಂಧಪಟ್ಟ ಯೋಜನೆಗಳು, ತರಬೇತಿ ರೂಪಿಸಿದ್ದು, ಇವುಗಳ ಸದುಪಯೋಗವನ್ನು ಪ್ರತಿಯೊ ಬ್ಬರು ಪಡೆದುಕೊಳ್ಳಬೇಕು ಎಂದರು.

ಕಲ್ಮಠಮಠದ ಕೊಟ್ಟೂರು ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕು ಅನಿಶ್ಚತತೆಯಾಗಿರುತ್ತದೆ. ಆದ್ದರಿಂದ ಜನರು ಕಾಯಕವನ್ನು ನಂಬಿ, ಸ್ವಾವಲಂಬಿಯಾಗಿ ಜೀವನ ನಡೆಸಬೇಕು. ಕೋವಿಡ್ ಪ್ರಯುಕ್ತ ಉದ್ಯೋಗ ಪರಿಕರ ಪಡೆದ ಫಲಾನುಭವಿಗಳು ಪ್ರಾಮಾಣಿಕವಾಗಿ ಕಾಯಕದಲ್ಲಿ ತೊಡಗಿಸಿಕೊಳ್ಳಿ. ನೀಡಿದ ಸಲಕರಣೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರು.

ಕೋವಿಡ್ ಪ್ರಯುಕ್ತ ಬಡವರಿಗೆ, ಮಡಿವಾಳ, ಕ್ಷೌರಿಕರು, ಬೀದಿ ಬದಿ, ತರಕಾರಿ, ಹೋಟೆಲ್, ಕಟ್ಟಡ ಕಾರ್ಮಿಕರು, ಟೈಲರ್, ಮೆಕ್ಯಾನಿಕ್, ಪೇಪರ್ ಹಾಕುವವರಿಗೆ ಸೇರಿದಂತೆ ಒಟ್ಟು 140 ಫಲಾನುಭವಿಗಳಿಗೆ, ಸೈಕಲ್, ಕುಕ್ಕರ್, ತರಕಾರಿ ಬಂಡಿ, ಇಸ್ತ್ರಿ ಪೆಟ್ಟಿಗೆ, ಡ್ರಮ್ಸ್ ಸೆಟ್, ಪ್ಲಾಸ್ಕ್, ಹಿಟ್ಟು ಬಿಸುವ ಗಿರಣಿ, ಎಲೆಕ್ಟ್ರಿಕಲ್ ಹೊಲಿಗೆ ಯಂತ್ರ, ಕಲರ್ ಪ್ರಿಂಟರ್, ಗ್ರೀಸ್ ಬಕೆಟ್ ಸೇರಿದಂತೆ ಇತರೆ ವಸ್ತುಗಳನ್ನು
ವಿತರಣೆ ಮಾಡಲಾಯಿತು.

ಸಲಹಾ ಸಮಿತಿ ಸದಸ್ಯ ಚನ್ನಬಸವಯ್ಯಸ್ವಾಮಿ, ಲಯನ್ಸ್ ಕಾರ್ಯದರ್ಶಿ ಸತೀಶ್ ಭೋಜ್‌ಶೆಟ್ಟಿ, ವಿಕಾಸ ಅಕಾಡೆಮಿ ಸಂಚಾಲಕ ವಿರೇಶ್ ಮ್ಯಾಗೇರಿ,ಮಂಜುನಾಥ ಹೊಸಕೇರಾ, ತಾಲ್ಲೂಕು ಸಂಯೋಜಕಿ ಸುಮಂಗಲ, ಶ್ರೀನಿವಾಸ ಕುಲಕರ್ಣಿ, ಉಮೇಶ್ ವೈ, ವಿರೇಶ್, ಅನುಶಿಲ್ಪಿ, ರುದ್ರೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು