ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ಜೋಡಿ

Last Updated 22 ನವೆಂಬರ್ 2022, 5:45 IST
ಅಕ್ಷರ ಗಾತ್ರ

ಕೊಪ್ಪಳ: ಹಜರತ್‌ ಮೆಹಬೂಬ್‌ ಸುಭಾನಿ ಗ್ಯಾರವಿ ಶರೀಫ್‌ ಅಂಗವಾಗಿ ನಗರದಲ್ಲಿ ಭಾನುವಾರ ಮುಸ್ಲಿಂ ಪಂಚ ಕಮಿಟಿ ವತಿಯಿಂದ ಐದು ಬಡ ಮುಸ್ಲಿಂ ಜೋಡಿಯ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಿತು. ನವ ಜೋಡಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಜಮೀರ್‌ ಅಹ್ಮದ್ ಖಾನ್‌ ‘ಸಮಾಜದಲ್ಲಿ ಅತ್ಯಂತ ಕಡುಬಡತನ ರೇಖೆಯಲ್ಲಿರುವ ಅನೇಕ ಕುಟುಂಬಗಳಿಗೆ ಇಂದಿನ ಪರಿಸ್ಥಿತಿಯಲ್ಲಿ ಲಕ್ಷಾಂತರ ಖರ್ಚು ಮಾಡಿ ಮದುವೆ ಮಾಡುವುದು ಕಷ್ಟ. ಇಂಥ ಕುಟುಂಬಗಳಿಗೆ ನೆರವಾಗಲು ಮುಸ್ಲಿಂ ಪಂಚಕಮಿಟಿ ಸತತವಾಗಿ 18 ವರ್ಷಗಳಿಂದ ಶ್ರಮಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದ ಮುಖಂಡರಾದ ಕೆ.ಎಂ. ಸೈಯದ್‌, ರಾಜು ನಾಯಕ್, ಹಜರತ್ ಮುಫ್ತಿ ನಜೀರ್ ಅಹ್ಮದ್ ತಸ್ಕಿನ್ ಖಾದ್ರಿ, ಹೈದರ್ ಅಲಿ ಮೌಲಾನಾ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ, ಅಂಜುಮನ್ ಕಮಿಟಿ ಅಧ್ಯಕ್ಷ ಪೀರಾ ಹುಸೇನ್ ಮಂಗಳಾಪುರ್, ಸಮಾಜದ ಮುಖಂಡರಾದ ಬಾಷುಸಾಬ ಖತೀಬ್, ಅಮ್ಜದ್‌ ಪಟೇಲ, ಕಾಟನ್ ಪಾಷಾ, ಮಾನ್ವಿ ಭಾಷಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT