ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಹುಲ್ಲಿನ ಬಣವೆ ಭಸ್ಮ

Published 8 ಮೇ 2024, 16:40 IST
Last Updated 8 ಮೇ 2024, 16:40 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಾರಟಗಿ: ವಿದ್ಯುತ್‌ ತಂತಿಗಳ ಸ್ಪರ್ಷದಿಂದ ಕಿಡಿಗಳು ಉದುರಿ 5 ಎಕರೆಯ ಭತ್ತದ ಹುಲ್ಲಿನ ಬಣಿವೆ ಬಹುಪಾಲು ಭಸ್ಮವಾಗಿರುವ ಘಟನೆ ತಾಲ್ಲೂಕಿನ ಪನ್ನಾಪುರದಲ್ಲಿ ಬುಧವಾರ ಜರುಗಿದೆ.

ಪನ್ನಾಪುರದ ದುರ್ಗಪ್ಪ ಜಂಬಣ್ಣ ಎಂಬುವವರಿಗೆ ಸೇರಿದ ಹುಲ್ಲಿನ ಬಣಿವೆ ಇದಾಗಿದೆ.
ಹುಲ್ಲಿನ ಬಣಿವೆಯ ಮೇಲೆ ವಿದ್ಯುತ್‌ ತಂತಿಗಳು ಹಾದುಹೋಗಿದ್ದು, ಕಾಗೆಗಳು ತಂತಿಗಳ ಮೇಲೆ ಕುಳಿತಿದ್ದರಿಂದ ತಂತಿಗಳು ಪರಸ್ಪರ ಸ್ಪರ್ಶವಾಗಿ ವಿದ್ಯುತ್‌ ಕಿಡಿಗಳು ಉದುರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದರು.

ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಶ್ರಮಿಸಿದರು. ಸ್ಥಳೀಯರು ಕೈಜೋಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT