ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ: ತುಂಗಭದ್ರಾ ಮಂಡಳಿ ನೌಕರ ಸಾವು

Published 10 ಜುಲೈ 2024, 5:33 IST
Last Updated 10 ಜುಲೈ 2024, 5:33 IST
ಅಕ್ಷರ ಗಾತ್ರ

ಮುನಿರಾಬಾದ್: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಇಂಡಿಯಾ ರಿಸರ್ವ್ ಬಟಾಲಿಯನ್ ಘಟಕದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸೋಮವಾರ ಮೃತಪಟ್ಟಿದ್ದಾರೆ.

ವಿಜಯನಗರ ಜಿಲ್ಲೆಯ ಟಿ.ಬಿ. ಡ್ಯಾಂನ ಮಣಿಕಂಠೇಶ್ವರ ಟಿ. ಅಪ್ಪಾರಾವ್ (28) ಮೃತರು. ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಮೃತ ದೇಹ ಟ್ರೇಲರ್ ಲಾರಿಯ ಕೆಳಗೆ ಕಂಡುಬಂದಿದೆ. ಮುನಿರಾಬಾದ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಮೃತ ಮಣಿಕಂಠೇಶ್ವರ ಅವರು ತುಂಗಭದ್ರಾ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕುಟುಂಬದ ಕಣ್ಣೀರು: ಮೃತ ಮಣಿಕಂಠೇಶ್ವರನ ಪತ್ನಿಗೆ ಭಾನುವಾರವಷ್ಟೆ ಗಂಡು ಮಗು ಜನಿಸಿದ್ದು, ಸೋಮವಾರ ಅಪಘಾತ ಸಂಭವಿಸಿದೆ ಎಂದು ಕುಟುಂಬದವರು ದುಃಖ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT