ಹೋಂಸ್ಟೇಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ದಾಖಲೆ ಪಡೆಯದೆ ರೂಮ್ ಬಾಡಿಗೆ ಪ್ರವಾಸಿಗರಿಂದ ನೆರೆ-ಹೊರೆಯವರಿಗೆ ಕಿರಿಕಿರಿ
ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಭಾರತೀಯ ಸಂಸ್ಕೃತಿ ಉಡುಗೆ ತೊಡುಗೆಗಳನ್ನ ಧರಿಸುವ ಬಗ್ಗೆ ಸರ್ಕಾರ ನಿಯಮ ಮಾಡಬೇಕು. ಆಕ್ರಮ ಮದ್ಯ ಮಾರಾಟಕ್ಕೆ ಪೊಲೀಸರು ಕಡಿವಾಣ ಹಾಕಬೇಕು.
ಮಂಜುನಾಥ ಇಂಡಿ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯ
ಸಾಣಾಪುರ ಆನೆಗೊಂದಿ ಭಾಗದಲ್ಲಿ ಅನಧಿಕೃತ ಹೋಂ ಸ್ಟೇ ರೆಸಾರ್ಟ್‌ಗಳಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಂದಲೇ ಅಪರಾಧಗಳು ಜರುಗುತ್ತಿವೆ. ಅನಧಿಕೃತವಾಗಿರುವ ಹೋಂ ಸ್ಟೇಗಳನ್ನು ಜಿಲ್ಲಾಡಳಿತ ತೆರವು ಮಾಡಿಸಬೇಕು.
ಪಂಪಣ್ಣ ನಾಯಕ ಜಿಲ್ಲಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ
ಹೋಂ ಸ್ಟೇ ಆರಂಭಿಸುವವರು ತಮ್ಮ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯಬೇಕು. ನಮ್ಮಿಂದ ಯಾರೂ ಅನುಮತಿ ಪಡೆದಿಲ್ಲ.
ನಾಗರಾಜ್ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಅಕ್ರಮಗಳಿಗೆ ತಲೆ ಕಡೆಸಿಕೊಳ್ಳದ ಗ್ರಾ.ಪಂ
ಆಡಳಿತ ಸಾಣಾಪುರ ಗ್ರಾಮದಲ್ಲಿ ನಡೆಯುವ ಮದ್ಯ ಆಕ್ರಮ ಮಾರಾಟ ಅನಧಿಕೃತ ಹೋಂ ಸ್ಟೇ ಹರಿಗೋಲು ಸವಾರಿ ಕ್ಲಿಪ್ ಜಂಪಿಂಗ್ ಚಟುವಟಿಕೆ ಬಗ್ಗೆ ಗ್ರಾಮ ಪಂಚಾಯಿತಿಯ ಯಾರೂ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ.