ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್ ಕೊಡುಗೆ ಅಪಾರ’

Last Updated 14 ಏಪ್ರಿಲ್ 2021, 10:24 IST
ಅಕ್ಷರ ಗಾತ್ರ

ಕುಕನೂರು: ‘ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಅವರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಭು ಜೋಳದ್ ಅಭಿಪ್ರಾಯಪಟ್ಟರು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಬಾ ಸಾಹೇಬರು ದೇಶದ ಪರಿಶಿಷ್ಟರ, ಬಡವರ ಏಳಿಗೆಗೆ ಜೀವನ ಮುಡಿಪಾಗಿಟ್ಟರು. ದೇಶದಲ್ಲಿರುವ ಅಸಮಾನತೆ ನಿರ್ಮೂಲನೆ ಮಾಡಬೇಕು ಎಂದು ಅವರು ಪಣ ತೊಟ್ಟಿದ್ದರು’ ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ, ‘ಅಂಬೇಡ್ಕರ್‌ ವಿಚಾರಗಳು ಎಲ್ಲರಿಗೆ ತಲುಪುವಂತೆ ಆಗಬೇಕು. ಅವರ ಆದರ್ಶ ಮತ್ತು ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತ’ ಎಂದು ಅಭಿಪ್ರಾಯಪಟ್ಟರು.

ಪಿಎಸ್‌ಐ ವೆಂಕಟೇಶ.ಎನ್ ಮಾತನಾಡಿದರು.

ಮಾರುತಿ ಗಾವರಾಳ, ಬಸವರಾಜ ಅಡವಿ, ಕನಕಪ್ಪ ಬ್ಯಾಡರ್, ರಾಮಣ್ಣ ಬಂಕದಮನಿ, ನಿಂಗಪ್ಪ ಗೊರ್ಲೆಕೊಪ್ಪ, ರಮೇಶ ಶಾಸ್ತ್ರಿ, ನಾಗಪ್ಪ ಕಲ್ಮನಿ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಶಂಕರ ಭಂಡಾರಿ, ಶರಣಪ್ಪ ಕಾಳಿ, ಭೀಮಣ್ಣ ಗುಡದಳ್ಳಿ, ರಘು ಕಲ್ಮನಿ, ಶಶಿ ಭಜಂತ್ರಿ, ಗವಿಸಿದ್ಧಪ್ಪ ಶೆಲವಡಿ ಹಾಗೂ ರಾಜೇಶ ಕಾತರಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT