ಗುರುವಾರ , ಮಾರ್ಚ್ 30, 2023
24 °C

‘ಹೈನುಗಾರಿಕೆಯಿಂದ ಆರ್ಥಿಕ ಸಬಲತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ‘ಹೈನುಗಾರಿಕೆಯಿಂದ ಆರ್ಥಿಕ ಸಬಲತೆ ಸಾಧ್ಯ’ ಎಂದು ರಾಬಕೊ ಹಾಲು ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ ಹೇಳಿದರು.

ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಿಸಾನ್ ಕಾರ್ಡ್‍ಗಳಿಂದ ರೈತರು ಸಾಲ ಪಡೆಯಬಹುದಾಗಿದೆ ಎಂದರು.

ಲಾಭದಾಯಕವಾದ ಈ ಹೈನೋದ್ಯಮದಿಂದ ಬಹುಬೇಗ ಸಾಲದಿಂದ ಋಣಮುಕ್ತರಾಗಲು ಸಾಧ್ಯವಿದೆ. ಆಕಳಿಗೆ ₹14 ಹಾಗೂ ಎಮ್ಮೆ ಖರೀದಿಗೆ ಬ್ಯಾಂಕ್‌ ₹16 ಸಾವಿರ ಸಾಲ ನೀಡಲಿದೆ ಎಂದರು.

ಪ್ರಗತಿಪರ ರೈತ ನಾರಾಯಣರಾವ್ ಕುಲಕರ್ಣಿ ಮಾತನಾಡಿ,‘ಹೈನುಗಾರಿಕೆಯಿಂದ ಸಾವಯವ ಕೃಷಿ ಹಾಗೂ ಇನ್ನಿತರ ಲಾಭದಾಯಕ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಮೂಲಿ ಮಾತನಾಡಿದರು.

ತಾ.ಪಂ ಮಾಜಿ ಸದಸ್ಯ ಪ್ರಭುರಾಜ ಹವಾಲ್ದಾರ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ರವಿಕುಮಾರ, ಹಾಲು ಉತ್ಪಾದಕ ಸಂಘದ ನಿರ್ದೇಶಕರಾದ ವೀರಯ್ಯ ಸರಗಣಾಚಾರ, ತೀರ್ಥಪ್ಪ ಭಜಂತ್ರಿ, ಶರಣಪ್ಪ ಜಗ್ಗಲ್, ಬಾಲರಾಜ ಕೋರಿ, ಮಂಜುಳಾ ಕೊಂಡಗುರಿ, ರೇಣುಕಾ ಕೋಳೂರ, ಶಂಕ್ರಪ್ಪ ವಾದಿ, ನೀಲಕಂಡಪ್ಪ ಮೂಲಿ, ಕ್ಷೇತ್ರಾಧಿಕಾರಿ ಮಹೇಶ ರಾಂಪೂರ, ಪಶುವೈದ್ಯಾಧಿಕಾರಿ ಪ್ರವೀಣ ಹಾಗೂ ಗವಿಸಿದ್ದಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.