ಕೊಪ್ಪಳ: ಎಜುಕೇರ್ ಶಾಲೆಯಲ್ಲಿ ವಾರ್ಷಿಕೋತ್ಸವ

ಕೊಪ್ಪಳ: ಇಲ್ಲಿನ ಚನ್ನಬಸವ ನಗರದಲ್ಲಿರುವ ಎಜ್ಯುಕೇರ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈಚೆಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ,‘ಓದು ಮತ್ತು ಬರವಣಿಗೆ ಜತೆಗೆ ಕ್ರೀಡಾಕೂಟಗಳಿಗೂ ಆದ್ಯತೆ ನೀಡಬೇಕು’ ಎಂದರು.
ಶಾಲಾ ಟ್ರಸ್ಟ್ ಅಧ್ಯಕ್ಷ ಡಾ.ಶೀನಿವಾಸ್ ಹ್ಯಾಟಿ ಮಾತನಾಡಿ,‘ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಶಾಲೆಯ ಹೊಸ ಕಟ್ಟಡವನ್ನು ಆದಷ್ಟು ಬೇಗನೆ ನಿರ್ಮಿಸಲಾಗುವುದು’ ಎಂದರು.
ಕ್ರೀಡಾಕೂಟಗಳಲ್ಲಿ ಗೆಲುವು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವೆಂಕನಗೌಡ್ರ ಹಿರೇಗೌಡ್ರ, ಆಡಳಿತಾಧಿಕಾರಿ ಗಿರಿಜಾಪತಿ ಸ್ವಾಮಿ ಎಸ್.ಎಂ., ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್, ಶಿವಕುಮಾರ ಪಾವಲಿಶೆಟ್ಟರ, ಬಸವರಾಜ ಉಂಕಿ, ಶಾಲಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರ, ಎಂ.ಕಾಟನ್ ಪಾಷಾ, ಡಾ. ಚಂದ್ರಶೇಖರೆಡ್ಡಿ ಎಸ್. ಕರಮುಡಿ, ಮಂಜುನಾಥ ಅಂಗಡಿ, ರಮೇಶ ತುಪ್ಪದ್, ಶರಣಪ್ಪ ಸಜ್ಜನ್, ಅಜೀಮ್ ಅತ್ತಾರ್, ಶಿಕ್ಷಕಿಯರಾದ ಪುಷ್ಪಾ, ಶಿಲ್ಪಾ ಕರಿಗೌಡರ್, ರಾಜಶ್ರೀ ತುಂಬಳದ್, ಸುನಿತಾ ಗೌರಿಪುರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.