ಬುಧವಾರ, ಜುಲೈ 28, 2021
21 °C
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಕೊಪ್ಪಳ | ಎಪಿಎಂಸಿ ಚುನಾವಣೆ: ಅವಿರೋಧವಾಗಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 4ನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ನಾಗರಾಜ ಚಳ್ಳೊಳ್ಳಿ ಹಾಗೂ ಉಪಾಧ್ಯಕ್ಷರಾಗಿ ವೆಂಕಣ್ಣ ವರಕನಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್‌, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಕೆ.ರಾಜಶೇಖರ ಹಿಟ್ನಾಳ, ಸದಸ್ಯ ಗೂಳಪ್ಪ ಹಲಗೇರಿ ಚುನಾಯಿತರನ್ನು ಅಭಿನಂದಿಸಿದರು. ಬಳಿಕ ಬೆಂಬಲಿಗರು ಎ.ಪಿ.ಎಂ.ಸಿ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಸಿದ್ದಯ್ಯಸ್ವಾಮಿ ಹಿರೇಮಠ, ಅಜೀಮ್‌ ಅತ್ತಾರ, ಮೆಹಬೂಬ್‌ ಅರಗಂಜಿ, ಅಕ್ಬರ್‌ಪಾಷಾ ಪಲ್ಟನ್‌, ಮುಖಂಡರಾದ ಹನುಮಂತಗೌಡ್ರು ಪೋಲಿಸ್ ಪಾಟೀಲ, ವೆಂಕನಗೌಡ ಹಿರೇಗೌಡ್ರು, ಭರಮಪ್ಪ ನಗರ, ಪ್ರಸನ್ನ ಗಡಾದ, ವಿರುಪಣ್ಣ ನವೋದಯ, ಶಿವಕುಮಾರ ಪಾವಲಿಶೆಟ್ಟರ, ಅಡಿವೆಪ್ಪ ರಾಟಿ ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಜಿ.ಬಿ.ಮಜ್ಜಿಗಿ ಕಾರ್ಯ ನಿರ್ವಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು