ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಇಲ್ಲದೇ ಭೋಜನ ವ್ಯವಸ್ಥೆ: ಅಧಿಕಾರಿಗಳ ದಾಳಿ

Published 13 ಏಪ್ರಿಲ್ 2024, 15:39 IST
Last Updated 13 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ಕಾರಟಗಿ: ಲೋಕಸಭಾ ಚುನಾವಣೆಯ ನಿಮಿತ್ತ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಅನುಮತಿ ಪಡೆಯದೇ ಪ್ರಚಾರ ಕಾರ್ಯ ಕೈಗೊಂಡು ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವಾಗ ಅಧಿಕಾರಿಗಳು ದಾಳಿ ನಡೆಸಿ, ಸಭೆಯನ್ನು ಮೊಟಕುಗೊಳಿಸಿದ, ಭೋಜನದ ವ್ಯವಸ್ಥೆಗೆ ತಂದಿದ್ದ ಸಾಮಾನುಗಳನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಸಿದ್ದಾಪುರ ಹೋಬಳಿಯ ಕುಂಟೋಜಿ ಸೀಮಾದಲ್ಲಿ ಗುರುವಾರ ಜರುಗಿದ್ದು, ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

ಗುರುವಾರ ಕುಂಟೋಜಿ ಸೀಮಾದ ಡಗ್ಗಿ ಮಾರೆಮ್ಮ ದೇವಾಲಯದ ಆವರಣದಲ್ಲಿ ರಾಜಶೇಖರ ಹಿಟ್ನಾಳ ಪ್ರಚಾರ ಕಾರ್ಯ ಕೈಗೊಂಡಿದ್ದರು. ಮತದಾರರನ್ನು ಸೆಳೆಯಲು ಊಟದ ವ್ಯವಸ್ಥೆಯನ್ನೂ ಮಾಡಿದ್ದರು.

ವಿಷಯ ತಿಳಿದ ಫ್ಲೈಯಿಂಗ್‌ ಸ್ಕ್ವಾಡ್‌ನ ಹರೀಶ ಪತ್ತಾರ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ, ಪ್ರಚಾರಕ್ಕೆ ಅನುಮತಿ ಪಡೆದ ಬಗ್ಗೆ ಪ್ರಶ್ನಿಸಿದಾಗ ಹಿಟ್ನಾಳ ಅನುಮತಿ ಪತ್ರ ಇಲ್ಲ ಎಂದುತ್ತರಿಸಿದರು. ಬಳಿಕ ಸಭೆಯನ್ನು ಮೊಟಕುಗೊಳಿಸಿದ ಅಧಿಕಾರಿಗಳು, ಭೋಜನ ಮಾಡಲೆಂದು ಬಂದಿದ್ದ ಜನರನ್ನು ಚದುರಿಸಿ, ಊಟಕ್ಕೆ ಬಳಸಿದ್ದ ವಿವಿಧ ಸಾಮಾನುಗಳನ್ನು ಜಪ್ತಿ ಮಾಡಿ, ಶುಕ್ರವಾರ ದೂರು ಸಲ್ಲಿಸಿದ್ದಾರೆ.
ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT