ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಾಯಿ ಕುಣಿತ: ಪ್ರಶ್ನಿಸಿದ್ದಕ್ಕೆ ಪೊಲೀಸ್ ಮೇಲೆ ಹಲ್ಲೆ

15 ಜನರ ವಿರುದ್ಧ ಪ್ರಕರಣ ದಾಖಲು
Last Updated 31 ಆಗಸ್ಟ್ 2020, 8:35 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆರಾಳ್‌ ಗ್ರಾಮದಲ್ಲಿ ಮಸೀದಿ ಎದುರು ಬೆಂಕಿ ಹಾಕಿ ಹಲಿಗೆ ಬಡಿಯುತ್ತ ಕುಣಿಯುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿದೆಯೆಂದು ಆರೋಪಿಸಿ ಪೊಲೀಸ್‌ ಕಾನ್ಸ್‌ಟೆಬಲ್ ಸೋಮನಾಥ ತಳವಾರ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಪ್ರಭು, ತಿಮ್ಮಣ್ಣ, ಅಶೋಕ, ವೆಂಕಟೇಶ, ಮುದಿಯಪ್ಪ, ಉಮೇಶ, ಶರಣಪ್ಪ, ಶಿವು, ರುದ್ರೇಶ್‌, ಸಿದ್ದಪ್ಪ, ಯಮನೂರ, ಕನಕಪ್ಪ, ಗವಿಸಿದ್ದ ನಾಯಕ, ಮಹೇಶ ಹಾಗೂ ಚಂದುಸಾಬ‌ ವಿರುದ್ಧ ದೂರು ದಾಖಲಾಗಿದೆ.

‘ಸೋಮನಾಥ ಅವರು ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಕೆಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಗ್ರಾಮೀಣ ಠಾಣೆ ಸಿಪಿಐ ಸುರೇಶ ತಳವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT