ಶನಿವಾರ, ಜನವರಿ 23, 2021
22 °C

‘ಪ್ರಜಾಪ್ರಭುತ್ವದ ಅರಿವು ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ‘ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ನೈತಿಕವಾಗಿರಬೇಕು ಎಂದು ಅರಿವು ಮೂಡಿಸಲು ಶಾಲಾ ಮತದಾರರ ಸಾಕ್ಷರತಾ ಕ್ಲಬ್‍ನಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಮುಖ್ಯಶಿಕ್ಷಕ ಹುಸೇನಸಾಬ ಇಲಕಲ್ಲ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್, ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಮತದಾರರ ಸಾಕ್ಷರತಾ ಕ್ಲಬ್‍ನಿಂದ ನಡೆದ ಜಾಗೃತಿ ಜಾಥಾದಲ್ಲಿ ಅವರು
ಮಾತನಾಡಿದರು.

ವಿದ್ಯಾರ್ಥಿಗಳು 18 ವರ್ಷಕ್ಕೆ ಕಾಲಿಟ್ಟ ಬಳಿಕ ತಾವು ಮತದಾನ ಯಾಕೆ ಮಾಡಬೇಕು ಎಂಬ ಅರಿವು ಮೂಡಿಸುವುದು ಅವಶ್ಯವಾಗಿದೆ. ಮೊದಲ ಬಾರಿಗೆ ಮತದಾನ ಮಾಡುವ ಸಂಭ್ರಮವನ್ನು ಯುವಕರು ಅನುಭವಿಸಬೇಕು ಎಂದು ಅವರು ಹೇಳಿದರು.

ಶಾಲಾ ಮತದಾರರ ಸಾಕ್ಷರತಾ ಕ್ಲಬ್ ಸಂಚಾಲಕಿ ರೋಹಿಣಿ ಜ್ಯೋತಿ ಮಾತನಾಡಿ,‘ಪ್ರಜಾಪ್ರ
ಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ನೈತಿಕ ಮತದಾನದ ಬಗ್ಗೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳ ಮೂಲಕ ತಿಳಿಸಲಾಗುತ್ತಿದೆ’ ಎಂದು ಹೇಳಿದರು.

ಶಿಕ್ಷಕರಾದ ರೋಹಿಣಿ ಜ್ಯೋತಿ, ಸುಮಂಗಲಾ ತರಿಕೇರಿ, ಗೀತಾ ದೇವಾಂಗಮಠ, ಗೀತಾ ಪಾಟೀಲ, ಶಾರದಾ ಗುಡಸಲಿ, ಉಮಾಕಾಂತ ರಜಪೂತ, ನಾರಾಯಣ ಹೂಲಗೇರಿ, ರಾಜಬಕ್ಷಾರ ಪೆಂಡಾರಿ ಹಾಗೂ ಬಸಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.