ಬುಧವಾರ, ಮೇ 18, 2022
27 °C

ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದ ಬಾಬುಜಿ: ಸಂಸದ ಜಾಧವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ‘ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರು ನೆಹರೂ ಸಂಪುಟದಲ್ಲಿ ಕೃಷಿ ಸಚಿವರಾಗಿ, ಹಲವು ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದಷ್ಟೇ ಅಲ್ದದೆ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ಮಾದಿಗ ಸಮಾಜ ಆಯೋಜಿಸಿದ ಜಗಜೀವನರಾಂ ಅವರ 115ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆವಹಿಸಿ ಮಾತನಾಡಿ ಶಾಸಕ ಡಾ.ಅವಿನಾಶ ಜಾಧವ, ಪಟ್ಟಣದಲ್ಲಿ ಸೂಕ್ತ ಸ್ಥಳ ಗುರುತಿಸಿ ₹50ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

ಜಗದೇವ ಗುತ್ತೇದಾರ, ಸುಭಾಷ ರಾಠೋಡ, ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಮಾದಿಗ ಸಮಾಜದ ಮುಖಂಡ ಗೋಪಾಲರಾವ ಕಟ್ಟಿಮನಿ ಮಾತನಾಡಿದರು. ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಜೆ.ಟಿ.ಧರಣಿ ವಿಶೇಷ ಉಪನ್ಯಾಸ ನೀಡಿದರು.

ಹಿರೇಮಠದ ನೀಲಕಂಠ ಮರಿದೇವರು, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ಪರಮೇಶ್ವರ ಮಡಿವಾಳ, ಸಂತೋಷ ಪಾಟೀಲ, ಭೀಮಣ್ಣಾ ಬಿಲ್ಲಾವ್, ಶೇಖರ ಪಾಟೀಲ, ಅಲ್ಲಮಪ್ರಭು ಹುಲಿ, ಚಂದ್ರಕಾಂತ ಜಾಧವ, ಶಿವಶರಣಪ್ಪ ಗುತ್ತೇದಾರ, ಸಂತೋಷ ಜಾಧವ, ರಾಜಕುಮಾರ ರಾಜಾಪುರ, ಕಾಳು ಪಡಶೆಟ್ಟಿ, ರಮೇಶ ಕಿಟ್ಟದ, ಸುಂದರ ಸಾಗರ, ಕೃಷ್ಣ ಕಟ್ಟಿಮನಿ, ವಿನೋದ ಓಂಕಾರ ಅನೇಕರು ವೇದಿಕೆಯಲ್ಲಿದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಕಟ್ಟಿಮನಿ ಸ್ವಾಗತಿಸಿ, ಸೂರ್ಯಕಾಂತ ಕಟ್ಟಿಮನಿ ನಿರೂಪಿಸಿದರು.

ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದವರೆಗೆ ನಡೆದ ಜಗಜೀವನರಾಂ ಮೂರ್ತಿಯ ಭವ್ಯ ಮೆರವಣಿಗೆಗೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಪ್ರಶಾಂತ ಕದಂ ಚಾಲನೆ
ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.