ಕುಕನೂರು: ಸಮಾಜ ಸಂಘಟನೆ ಎಂಬುವುದು ಹೂವಿನ ಹಾಸಿಗೆ ಅಲ್ಲ. ಸಮಾಜ ಸಂಘಟನೆಯು ಸುಖ–ದುಃಖಗಳ ಸಮ್ಮಿಲನವಾಗಿದೆ. ಸಂಘಟನೆ ವೇಳೆ ಎಚ್ಚರಿಕೆಯಿಂದ ಇನ್ನೊಂದು ಸಮಾಜದ ಭಾವನೆಗೆ ಧಕ್ಕೆಯಾಗದಂತೆ ಬಣಜಿಗ ಸಮಾಜ ಸಂಘಟಿತವಾಗಿದೆ ಎಂದು ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಹೇಳಿದರು.

ಪಟ್ಟಣದಲ್ಲಿ ಬಣಜಿಗ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಮಾಜ ಸಂಘಟನೆ ರಾಜಕೀಯ ರಹಿತ ಸಂಘಟನೆಯಾಗಬೇಕು. ಸಂಘಟನೆ ಮತ್ತೊಂದು ಸಮಾಜದ ವಿರುದ್ಧ ಸಂಘಟನೆಯಲ್ಲ. ಬಣಜಿಗ ಸಮಾಜದಲ್ಲಿರುವ ಬಡವರಿಗೆ ಸಹಾಯ ಮಾಡುವ ಮೂಲಕ ಅವರು ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುವ ಉದ್ಧೇಶ ಒಳಗೊಂಡಿರಬೇಕು’ ಎಂದು ತಿಳಿಸಿದರು.

ಸಮಾಜದ ಹಿರಿಯ ಮುಖಂಡ ಅಂದಾನಪ್ಪ ಅಂಗಡಿ ಮಾತನಾಡಿ, ಬಣಜಿಗ ಸಮಾಜ ಸಂಘಟನೆ ಇನ್ನೊಂದು ಸಮಾಜದೊಂದಿಗೆ ಪೈಪೋಟಿ ನಡೆಸಲು ಅಲ್ಲವೇ ಅಲ್ಲ. ಲಿಂಗಾಯತ ಸಮಾಜವು ಸೇರಿದಂತೆ ಎಲ್ಲ ಸಮಾಜಗಳನ್ನು ಗೌರವದೊಂದಿಗೆ ನೋಡಿಕೊಂಡು ಸಂಘಟಿತರಾಗಿ ಸರ್ಕಾರ ನೀಡಿರುವ ಮೀಸಲಾತಿಯನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯರ ವಿಶ್ವನಾಥ ಮಳಗಿ, ಕಪ್ಪತ್ತಪ್ಪ ಅಂಗಡಿ, ಬಸವರಾಜ್ ಜೋಳದ, ಪ್ರಭು ಹೊಂಬಳ, ಜಂಬಣ್ಣ ಅಂಗಡಿ, ಮಲ್ಲಪ್ಪ ಗುತ್ತಿ, ವಿಜಯಕುಮಾರ ಅಂಗಡಿ, ಮಂಜುನಾಥ ಅಂಗಡಿ, ಜಯಪ್ರಕಾಶ ಹೊಗರಿ, ಪ್ರಕಾಶ ಕುದರಿಮೋತಿ, ಬಸವರಾಜ್ ಪಟ್ಟಣಶೆಟ್ಟಿ, ರವಿಕುಮಾರ್ ನಲ್ವಾಡ್, ಶರಣಪ್ಪ ಗುತ್ತಿ, ಪಂಚಾಕ್ಷರಿ ಯಾಕ್ಲಾಸಾಪುರ, ಈಶಪ್ಪ ಅಂಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.