ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘1,307 ಬೂತ್‌ಗಳಲ್ಲಿ ಸೇವೆ, ಸಮರ್ಪಣೆ ದಿನ’

ನರೇಂದ್ರ ಮೋದಿ ಸಿಎಂ, ಪಿಎಂ ಆಗಿ ಅಧಿಕಾರ ಸ್ವೀಕರಿಸಿ 20 ವರ್ಷ ಪೂರೈಸಿದ ಸ್ಮರಣೆಗೆ ಬಿಜೆಪಿ ಸಜ್ಜು
Last Updated 13 ಸೆಪ್ಟೆಂಬರ್ 2021, 6:10 IST
ಅಕ್ಷರ ಗಾತ್ರ

ಕೊಪ್ಪಳ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಶಯದಂತೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ 20 ವರ್ಷ ಸೇವೆ ಪೂರೈಸಿದ ಪ್ರಯುಕ್ತ ಸೆ.17ರಿಂದ ಜಿಲ್ಲೆಯ 1,307 ಬೂತ್‌ಗಳಲ್ಲಿಸೇವೆ ಮತ್ತು ಸಮರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದುಬಳ್ಳಾರಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರಗೌಡ ಜಿ ಪಾಟೀಲ್ ಹಲಗೇರಿ ಹೇಳಿದರು.

ಅವರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ,ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ರಾಜ್ಯದ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವಾದ ಅ.7, 2001ರ, 20ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಅವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ನಿರಂತರ ಇಪ್ಪತ್ತು ವರ್ಷ ಪೂರೈಸಲಿದ್ದಾರೆ ಎಂದರು.

2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಗಳಾಗಿ ಮತ್ತು 2014 ರಿಂದ ಭಾರತದ ಪ್ರಧಾನ ಮಂತ್ರಿಗಳಾಗಿ ಮುಂದುವರಿದಿದ್ದು, ಇದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಬೆರಳೆಣಿಕೆಯ ನಾಯಕರುಗಳಷ್ಟೆ ಗಳಿಸಲು ಸಾಧ್ಯವಾದ ಜನತೆಯ ಅನನ್ಯ ಆಶೀರ್ವಾದವಾಗಿದ್ದು, ಇದು ಮೋದಿ ಅವರ ನಿರಂತರ ಜನ ಪ್ರಿಯತೆ ಪ್ರತಿಬಿಂಬಿಸುತ್ತದೆ ಎಂದರು.

ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪೂಜಪ್ಪ ಹಡಗಲಿ ಸಭೆ ಉದ್ಘಾಟಿಸಿ ಮಾತನಾಡಿ, ಸೇವೆ ಮತ್ತು ಸಮರ್ಪಣಾ ಅಭಿಯಾನವನ್ನಾಗಿ ಜಿಲ್ಲೆಯ 1,307 ಬೂತ್‌ಗಳಲ್ಲಿ ಹಲವಾರು ವಿಭಿನ್ನ ಸೇವಾ ಕಾರ್ಯಕ್ರಮ ಮತ್ತು ಚಟುವಟಿಕೆಗಳಾದ ಅಂಗವಿಕಲರಿಗೆ ನೆರವು ಮತ್ತು ಉಪಯುಕ್ತ ಸಲಕರಣೆ ವಿತರಣೆ, ಜಿಲ್ಲಾ ಮಟ್ಟದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಸ್ಲಂ, ಅನಾಥಾಶ್ರಮ, ಆಸ್ಪತ್ರೆಗಳಲ್ಲಿ ಮತ್ತುವೃದ್ಧಾಶ್ರಮಗಳಿಗೆ ಹಣ್ಣು ಹಂಪಲು ವಿತರಿಸುವುದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಬೂತ್‌ನಲ್ಲಿ ಉಚಿತ ಪಡಿತರ ಚೀಲಗಳನ್ನು ವಿತರಿಸಲಾಗುವುದು ಎಂದರು.

ಸೆ.25 ರಂದು ಪಂ.ದೀನದಯಾಳ್ ಉಪಾಧ್ಯಾಯರ ಜಯಂತಿಯ ಅಂಗವಾಗಿ ಬಡವರು, ಹಿಂದುಳಿದ ವರ್ಗದವರು, ಹಾಗೂ ದಲಿತರ ಕಲ್ಯಾಣಕ್ಕಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಅ.2 ರಂದು ಮಹಾತ್ಮ ಗಾಂಧಿಯವರ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮ, ಸಣ್ಣ ಕುಶಲಕರ್ಮಿಗಳಿಗೆ ಪ್ರೋತ್ಸಾಹ, ಖಾದಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದುಎಂದರು.

ಮುಖಂಡರಾದನರಸಿಂಗರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಿಜಯ ತಾಳಕೇರಿ ಸ್ವಾಗತಿಸಿದರು.ನವೀನ ಗುಳಗಣ್ಣವರ್ ನಿರೂಪಿಸಿದರು, ರಮೇಶ ನಾಡಿಗೇರ್ ವಂದಿಸಿದರು. ಕೆ.ಮಹೇಶ, ಜಿ.ಸುಬ್ಬಾರಡ್ಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಎಲ್ಲ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT