ಗುರುವಾರ , ಡಿಸೆಂಬರ್ 12, 2019
26 °C

‘ಅಂಬೇಡ್ಕರ್‌ ಪ್ರಜಾಪ್ರಭುತ್ವ ಕಲ್ಪನೆ ವಿಶಿಷ್ಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹನುಮಸಾಗರ: ’ಅಂಬೇಡ್ಕರ್‌ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನವಾಗಿತ್ತು. ಸಮಾಜವನ್ನು ಆದರ್ಶ ಸಮಾಜವನ್ನಾಗಿ, ಸುಖಿರಾಜ್ಯವನ್ನಾಗಿ ಮಾಡಲು ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳನ್ನು ಒಟ್ಟಿಗೆ ಸಾಧಿಸುವ ಕನಸು ಕಂಡಿದ್ದರು‘ ಎಂದು ಮುಖಂಡ ಬಸವರಾಜ ಹಳ್ಳೂರ ಹೇಳಿದರು.

ಇಲ್ಲಿನ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಯುವಕ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ 62ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

’ಅಂಬೇಡ್ಕರ್ ತಮ್ಮ ಕಾರ್ಯ ಸಾಧನೆಯ ಹೋರಾಟದಲ್ಲಿಯೇ ಇಡೀ ಬದುಕನ್ನು ದೀನ ದಲಿತರ ಹಿತ ರಕ್ಷಣೆಗಾಗಿ ಕಳೆದರು. ಕೇವಲ ದಲಿತರಿಗೆ ಮಾತ್ರವಲ್ಲದೆ, ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ ನಿಲುವಿನಿಂದಾಗಿ ಭಾರತೀಯರೆಲ್ಲರ ಮನದಲ್ಲಿ ನೆಲೆಯಾಗಿದ್ದಾರೆ‘ ಎಂದು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಶರಣಪ್ಪ ಹುಲ್ಲೂರ, ಕಿಶನರಾವ್‌ ಕುಲಕರ್ಣಿ ತಿಳಿಸಿದರು.

ತಾಲ್ಲೂಕ ಪಂಚಾಯಿತಿ ಸದಸ್ಯೆ ಶಕೀಲಾ ಡಲಾಯಿತ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಹನುಮಂತ ಪೂಜಾರ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ವಾಲ್ಮೀಕಿ, ಉಪಾಧ್ಯಕ್ಷೆ ನೂರಜಹಾನಬಿ ಮೋಟಗಿ, ಭೋವಿ ಸಮಾಜದ ರಾಜ್ಯ ಉಪಾಧ್ಯಕ್ಷ ಸೂಚಪ್ಪ ಭೋವಿ, ಸ್ಥಳೀಯ ಮೋಚಿ ಸಮಾಜದ ಅಧ್ಯಕ್ಷ ಶಿವಕಾಂತಪ್ಪ ಹಾದಿಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು ಹಿರೇಮನಿ, ಶಿವಪುತ್ರಪ್ಪ ಕೋಳೂರ, ರಾಘವೇಂದ್ರ ವಡ್ಡರ, ಸಿಂಧೂರ ಲಕ್ಷ್ಮಣ ವಡ್ಡರ, ಪ್ರಮುಖರಾದ ಸೋಮಣ್ಣ ಹೊಸಮನಿ, ಚಂದಪ್ಪ ಗುಡಗಲದಿನ್ನಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ ಕಮತರ, ಪ್ರಮುಖರಾದ ಚಂದಪ್ಪ ಕುದರಿ, ಬಾಲಪ್ಪ ಬೆಳಗಲ್‌, ವೆಕಟೇಶ ಹೊಸಮನಿ, ಮಂಜುನಾಥ ಟೇಲರ್‌, ರಾಮಣ್ಣ ಮನ್ನೇರಾಳ, ಹುಲಗಪ್ಪ ಕಬ್ಬರಗಿ, ಯಮನೂರಪ್ಪ ಬಡಿಗೇರ, ಮಂಜುನಾಥ ಹುಲ್ಲೂರ, ಮಲ್ಲಪ್ಪ ಬದಾಮಿ, ಶೇಷಪ್ಪ ಬೆಳಗಲ್‌, ರಮೇಶ ಬಡಿಗೇರ, ಮಹಾಂತೇಶ ರಡ್ಡಿ ಇದ್ದರು.

ಜೈಭೀಮ ಕಟ್ಟಡ ಕೂಲಿ ಕಾರ್ಮಿಕರ ಸಂಘ, ಗುರುಪುಟ್ಟರಾಜ ಸ್ವರ ಸಂಗೀತ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.
ವೆಂಕಟೇಶ ಗುಡಗಲದಿನ್ನಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು