ಪ್ರಯಾಣಿಕರಿಗೆ ಕೊಳಚೆ ನೀರಿನ ಸಿಂಚನ
ಬಸ್ ನಿಲ್ದಾಣದಲ್ಲಿನ ಶೌಚಾಲಯ ಮೂತ್ರಾಲಯ ತೊಳೆದ ಮತ್ತು ಉಪಹಾರಗೃಹದ ಕೊಳಚೆ ನೀರು ನಿಲ್ದಾಣದ ಕೊಪ್ಪಳಕ್ಕೆ ತೆರಳುವ ಗೇಟ್ ಬಳಿ ಮಡುಗಟ್ಟಿ ನಿಲ್ಲುತ್ತಿದ್ದು ಪ್ರಯಾಣಿಕರಿಗೆ ಸಿಂಚನವಾಗುತ್ತಿದೆ. ಈ ಸಮಸ್ಯೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ಆರೋಪ. ಈ ಕುರಿತು ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕ ಸುಂದರಗೌಡ ಪಾಟೀಲ ಮುಂದಿನ ರಸ್ತೆ ನಿಲ್ದಾಣಕ್ಕಿಂತ ಎತ್ತರದಲ್ಲಿರುವುದು ಚರಂಡಿಗಳು ಮುಚ್ಚಿಕೊಂಡಿರುವುದರಿಂದ ಸಮಸ್ಯೆಯಾಗಿದೆ. ಜನ ಚರಂಡಿಗೆ ತ್ಯಾಜ್ಯ ಸುರಿಯುತ್ತಾರೆ. ತೆಗೆದುಹಾಕುವಂತೆ ಪುರಸಭೆಗೆ ಪದೇ ಪದೇ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.