ಅಂಗವಿಕಲರ ಆರೈಕೆ ಪುಣ್ಯದ ಕೆಲಸ: ಲತಾ ಗವಿಸಿದ್ಧಪ್ಪ ಚಿನ್ನೂರು

ಕೊಪ್ಪಳ: ‘ಅಂಗವಿಕಲರ ಆರೈಕೆ ಮಾಡುವುದು ಪುಣ್ಯದ ಕೆಲಸ’ ಎಂದು ನಗರಸಭೆ ಅಧ್ಯಕ್ಷ ಲತಾ ಗವಿಸಿದ್ಧಪ್ಪ ಚಿನ್ನೂರು ತಿಳಿಸಿದರು.
ಸಮೂಹ ಸಂಸ್ಥೆ ಹಾಗೂ ಕೇರರ್ಸ್ ವರ್ಲ್ಡ್‌ವೈಡ್ ಸಹಭಾಗಿತ್ವದಲ್ಲಿ ನಗರದ ಸಮೂಹ ಕ್ಯಾಂಪ್‌ನಲ್ಲಿ ಶನಿವಾರ ನಡೆದ ತೀವ್ರ ಪ್ರಮಾಣದ ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ಆಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬುದ್ಧಿಮಾಂಧ್ಯ ಹಾಗೂ ಇತರ ಹೆಚ್ಚಿನ ಅಂಗವಿಕಲತೆ ಇರುವ ಆರೈಕೆ ಮಾಡುವುದು ಕಷ್ಟದ ಕೆಲಸ. ಕೋವಿಡ್ ಸಂದರ್ಭದಲ್ಲಿ ಅಂಗವಿಕಲರಿಗೆ ನೆರವಾಗಲು ಸರ್ಕಾರಕ್ಕೆ ಕೋರಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಸಂಚಾಲಕರಾಗಿರುವ ಬಿ.ಹಂಪಣ್ಣ ಮಾತನಾಡಿ,‘ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಅಂಗವಿಕಲರಿಗೆ ಹಾಗೂ ಆರೈಕೆದಾರರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದೆ. ಸಂಸ್ಥೆಯ ಬೆಂಬಲದಿಂದ ಜಿಲ್ಲೆಯ 187 ಆರೈಕೆದಾರರ ಕುಟುಂಬಗಳನ್ನು ಗುರುತಿಸಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಆಹಾರ ಸಾಮಗ್ರಿ ವಿತರಿಸಲಾಗುವುದು’ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಮಾತನಾಡಿ,‘ಕೋವಿಡ್ ಸಂದರ್ಭದಲ್ಲಿ ವಿವಿಧ ದಾನಿಗಳು ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಆಹಾರ ಧಾನ್ಯ ಕಿಟ್ ನೀಡಿ ನೆರವಾಗಿದ್ದಾರೆ’ ಎಂದರು.
ಸಂಸ್ಥೆಯ ವ್ಯವಸ್ಥಾಪಕ ಎಚ್.ಎನ್.ಬಸಪ್ಪ, ಸಿಬ್ಬಂದಿ ಪ್ರಭಾಕರ, ಪ್ರಸಾದ, ಈರಮ್ಮ, ಮಲಿಯಮ್ಮ ಹಾಗೂ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.