ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌: ವಿಶೇಷ ಪ್ರಾರ್ಥನೆ

Last Updated 26 ಡಿಸೆಂಬರ್ 2019, 13:15 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ವಿಜಯನಗರ ಕಾಲೊನಿ ಹಾಗೂ ಕೊಪ್ಪಳ ರಸ್ತೆಯ ಸಿಬಿಎಸ್ ಗಂಜ್ ಆವರಣದಲ್ಲಿನ ಬಾಲ ಯೇಸು ಚರ್ಚ್‍ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನುಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಚರ್ಚ್‍ಗಳನ್ನು ಹೂವುಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಲಾಗಿತ್ತು. ಇನ್ನೂ ಬುಧವಾರ ಮುಂಜಾನೆ ಸಂಭ್ರಮ ಸಡಗರದಿಂದ ಯೇಸುವಿನ ಭಕ್ತಾದಿಗಳು ಚರ್ಚ್‍ಗಳಿಗೆ ಆಗಮಿಸಿ, ಸಾಮೂಹಿಕ ಪಾರ್ಥನೆಯನ್ನು ಸಲ್ಲಿಸಿದರು.

ನಂತರ ಯೇಸುವಿನ ಜನನದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕೇಕ್ ಕತ್ತರಿಸಿ, ಪರಸ್ಪರ ಸಿಹಿ ತಿನ್ನಿಸಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ಚರ್ಚ್ ಮುಖ್ಯಸ್ಥರಾದ ಜಾನ್ ಮುಳ್ಳೂರು ಪ್ರಮುಖರಾದ ಸರ್ವೇಶ ವಸ್ತ್ರದ್, ಸುಮಿತ್ರಾ ಸುಧಾಕರ, ಜೋಸೆಫ್‍ರಾಜ್, ನಿತ್ಯಾನಂದ, ಯೇಸುದಾಸನ್ ಹಾಗೂ ಮಿಲ್ಟನ್ ಇದ್ದರು.

ತಾಲ್ಲೂಕಿನ ಸಂಗಾಪುರ, ರಾಂಪುರ, ಜಂಗಮರ ಕಲ್ಗುಡಿ, ಬಸಾಪಟ್ಟಣ, ಬಾಪಿರೆಡ್ಡಿ ಕ್ಯಾಂಪ್, ಶ್ರೀರಾಮನಗರದ ಸೇರಿದಂತೆ ನಾನಾ ಗ್ರಾಮಗಳಲ್ಲಿ ಇರುವ ಚರ್ಚ್‍ಗಳಲ್ಲಿ ಕ್ರಿಸ್‍ಮಸ್‍ನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಯೇಸುವಿನ ಭಕ್ತಾದಿಗಳು ಉಡಗೊರೆ ಹಾಗೂ ಸಿಹಿ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT