ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಬೆಟ್ಟಕ್ಕೆ ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ

Last Updated 27 ಜುಲೈ 2022, 2:42 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಭೇಟಿ ನೀಡಿ, ಸ್ಥಳ ಪರಿಶೀಲಿಸಿದರು.

ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ ₹120 ಕೋಟಿ ಬಿಡುಗಡೆ ಮಾಡಿ, ಭಕ್ತರಿಗೆ ಬೇಕಾಗುವ ಮೂಲ ಸೌಲಭ್ಯ ಕಲ್ಪಿಸಲು ವಿಶೇಷ ಸಭೆ ನಡೆಸಿ, ಅಭಿವೃದ್ಧಿಗೆ ಬೇಕಾಗುವ ಭೂಮಿ ನೀಲನಕ್ಷೆಯಲ್ಲಿ ಗುರುತಿಸಿ, ವಶಕ್ಕೆ ಸಿದ್ಧತೆ ನಡೆಸಿತ್ತು.

ಇದೀಗ ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸುಂದರೇಬಾಬು ಎಂ. ಅಂಜನಾದ್ರಿ ಬೆಟ್ಟಕ್ಕೆ ಮೊದಲ ಬಾರಿ ಭೇಟಿ ನೀಡಿ ಅಂಜನಾದ್ರಿ ಅಭಿವೃದ್ಧಿ ನೀಲನಕ್ಷೆ, ಅಭಿವೃದ್ದಿ ಸಂಬಂಧಪಟ್ಟ ದಾಖಲೆ, ಪಾರ್ಕಿಂಗ್ ಸ್ಥಳ, ರಸ್ತೆ, ಮಳಿಗೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಜಮೀನುಗಳನ್ನು ಪರಿಶೀಲನೆ ನಡೆಸಿದರು.

ತಹಶೀಲ್ದಾರ ಕಚೇರಿಗೆ ಭೇಟಿ: ಅಂಜನಾದ್ರಿ ಭೇಟಿಯ ನಂತರ ಗಂಗಾವತಿ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ, ಆಡಳಿತ ಕಾರ್ಯವೈಖರಿ, ಪ್ರಗತಿ ಪರಿಶೀಲನೆ ನಡೆಸಿದರು.

ರಾಜ್ಯ ಸರ್ಕಾರದ ಆದೇಶದನ್ವಯ ಪ್ರತಿ ಮಂಗಳವಾರ ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಗಂಗಾವತಿ ತಹಶೀಲ್ದಾರ ಕಚೇರಿಗೆ ಮೊದಲ ಭೇಟಿ ನೀಡಿ, ಭೂಮಿ ಕೇಂದ್ರ, ಪಡಸಾಲೆ, ಆಹಾರ ಇಲಾಖೆ, ಸರ್ವೇ ಇಲಾಖೆ, ದಾಖಲೆ ಪತ್ರಗಳ ಇಲಾಖೆ, ಖಜಾನೆ, ಉಪನೋಂದಣಿ ಕಚೇರಿಗಳಿಗೆ ತೆರಳಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು.

ಎ.ಸಿ ಬಸವಣ್ಣೆಪ್ಪ ಕಲಶೆಟ್ಟಿ, ತಹಶೀಲ್ದಾರ ಯು.ನಾಗರಾಜ, ಶಿರಸ್ತೆದಾರ ಮಂಜನಾಥ ನಂದನ್, ಕಂದಾಯ ನಿರೀಕ್ಷಕ ಮಂಜುನಾಥ, ಶರಣಪ್ಪ ಬನ್ನಿಕೊಪ್ಪ ಸೇರಿದಂತೆ ತಾಲ್ಲೂಕು ಆಡಳಿತ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT