ಕುಷ್ಟಗಿ: ‘ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಉದಯಿಸಿದ ಕಾಂಗ್ರೆಸ್ ಪಕ್ಷ ದೇಶದ ಒಟ್ಟಾರೆ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ’ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ನ 140ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಂತರ ಅವರು ಮಾತನಾಡಿದರು.

‘ಬಡವರು, ದೀನ ದಲಿತರ ಸಬಲೀಕರಣಕ್ಕೆ ಶ್ರಮಿಸುತ್ತ ಬಂದಿದೆ. ಅಲ್ಲದೆ ರಸ್ತೆಗಳ ಅಭಿವೃದ್ಧಿ, ಉನ್ನತೀಕರಣ, ಕೃಷಿ ನೀರಾವರಿ ಮತ್ತು ವೈಜ್ಞಾನಿಕ ಕ್ಷೇತ್ರಗಳಿಗೆ ನೀಡಿದ ಮಹತ್ವವನ್ನು ದೇಶ ಗುರುತಿಸಿದೆ. ಭವಿಷ್ಯದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ತನ್ನ ತತ್ವ ಮತ್ತು ಬದ್ಧತೆಯೊಂದಿಗೆ ಜನರ ಏಳಿಗೆಗೆ ಶ್ರಮಿಸಲಿದೆ’ ಎಂದರು.

ಮುಖಂಡ ಶೇಖರಗೌಡ ಮಾಲೀಪಾಟೀಲ, ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಬಯ್ಯಾಪುರ, ಪುರಸಭೆ ಮಾಜಿ ಸದಸ್ಯ ಮಾಜಿ ಸದಸ್ಯ ವಸಂತ ಮೇಲಿನಮನಿ, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಲಾಡ್ಲೆಮಷಾಕ್ ಯಲಬುರ್ಗಿ, ಕೇದಾರನಾಥ ತುರಕಾಣಿ ಇತರರು ಮಾತನಾಡಿದರು.

ಸೋಮಶೇಖರ ವೈಜಾಪುರ, ಫಾರೂಕ್ ಡಲಾಯತ್, ಶಕುಂತಲಮ್ಮ ಹಿರೇಮಠ, ಶಾರದಾ ಕಟ್ಟಿಮನಿ, ಈರಣ್ಣ ಬದಾಮಿ, ಆಯೇಷಾಖಾನ್, ದುರಗೇಶ ಮಡಿವಾಳರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. ಇಮಾಮಸಾಬ್ ಗರಡಿಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.