ಸೋಮವಾರ, ಅಕ್ಟೋಬರ್ 19, 2020
24 °C

ಗಂಗಾವತಿಯಲ್ಲಿ ಭಾರಿ ಮಳೆ: ಮೆಕ್ಕೆಜೋಳ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹಲವು ಗ್ರಾಮಗಳಲ್ಲಿ ಬೆಳೆ ನಾಶವಾಗಿದೆ.

ತಾಲ್ಲೂಕಿನ ಹಣವಾಳ ಸಮೀಪದ ಗಾಂಧಿ ನಗರದಲ್ಲಿ ನಾಲೆಗಳು ತುಂಬಿ ಹರಿದ ಪರಿಣಾಮ ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ನೀರಿಗೆ ಆಹುತಿಯಾಗಿದೆ. ಮರಕುಂಬಿ ಹಾಗೂ ಗುಳದಾಳ ಭಾಗದಲ್ಲಿ ಭತ್ತ ನೆಲಕ್ಕುರುಳಿದೆ.

ಎಲ್ಲೆಲ್ಲಿ ಎಷ್ಟು ಮಳೆ: ಗಂಗಾವತಿ ವ್ಯಾಪ್ತಿಯಲ್ಲಿ 14.5 ಮಿ.ಮೀ ಮಳೆಯಾಗಿದೆ. ವೆಂಕಟಗಿರಿ ವ್ಯಾಪ್ತಿಯಲ್ಲಿ 11.2 ಮಿ.ಮೀ, ವಡ್ಡರಹಟ್ಟಿ ವ್ಯಾಪ್ತಿಯಲ್ಲಿ 10 ಮಿ.ಮೀ, ಕನಕಗಿರಿ ವ್ಯಾಪ್ತಿಯಲ್ಲಿ 4.2 ಮಿ.ಮೀ, ಹುಲಿಹೈದರ್‌ ವ್ಯಾಪ್ತಿಯಲ್ಲಿ 6.7 ಮಿ.ಮೀ, ನವಲಿ ವ್ಯಾಪ್ತಿಯಲ್ಲಿ 2.4 ಮಿ.ಮೀ, ಕಾರಟಗಿ ವ್ಯಾಪ್ತಿಯಲ್ಲಿ 3.2 ಮಿ.ಮೀ, ಸಿದ್ದಾಪುರ ವ್ಯಾಪ್ತಿಯಲ್ಲಿ 1 ಮಿ.ಮೀ ಮಳೆಯಾದ ವರದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.