ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ: ವನ್ಯಜೀವಿ ಸಂರಕ್ಷಣಾ ಪ್ರದೇಶ ಘೋಷಣೆಗೆ ಒತ್ತಾಯ

Published : 11 ಸೆಪ್ಟೆಂಬರ್ 2024, 16:08 IST
Last Updated : 11 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ಯಲಬುರ್ಗಾ: ತಾಲ್ಲೂಕಿನ ಮಂಡಲಮರಿ, ಮಕ್ಕಳ್ಳಿ ಲಿಂಗನಬಂಡಿ ಗ್ರಾಮಗಳಿಗೆ ಹೊಂದಿಕೊಂಡಿರುವ ಗುಡ್ಡಗಾಡು ಪ್ರದೇಶವು ವಿವಿಧ ವನ್ಯ ಪ್ರಾಣಿ, ಪಕ್ಷಿಗಳ ಆವಾಸ ಸ್ಥಾನವಾಗಿದ್ದು, ಅವುಗಳ ಸಂರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಬೇಕು ಎಂದು ವಿವಿಧ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿರುವ ಪದಾಧಿಕಾರಿಗಳು, ಮಕ್ಕಳ್ಳಿ ಮತ್ತು ಮಂಡಲಮರಿ ಗ್ರಾಮದ ಗುಡ್ಡದಲ್ಲಿ ತೋಳ, ನರಿ, ನವಿಲು, ಕರಡಿ, ಕತ್ತೆ ಕಿರುಬ, ಕಾಡು ಬೆಕ್ಕು, ಮುಳ್ಳು ಹಂದಿ, ಉಡಾ, ವಿವಿಧ ನಮೂನೆಯ ಹಾವುಗಳು ಕಂಡು ಬಂದಿವೆ. ಅಳಿವಿನ ಅಂಚಿನಲ್ಲಿರುವ ಅನೇಕ ಪ್ರಬೇಧಗಳ ಪ್ರಾಣಿಗಳು ಇಲ್ಲಿದ್ದು, ಅವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕಾಗಿದೆ. ಕರಡಿಗಳ ರೈತರ ಜಮೀನಿನ ಬೆಳೆ ಹಾಳು ಮಾಡುತ್ತಿರುವುದರಿಂದ ಹತ್ಯೆಗೆ ಒಳಗಾಗುತ್ತಿವೆ. ಈ ಕಾರಣದಿಂದ ಸರ್ಕಾರಿ ಈ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಪ್ರದೇಶ ಎಂದು ಘೋಷಿಸುವುದು ಅಗತ್ಯವಿದೆ. ಈ ಮೂಲಕ ಮನುಷ್ಯರ ಪ್ರಾಣ ಹಾನಿ ಮತ್ತು ವನ್ಯಜೀವಿಗಳ ರಕ್ಷಣೆಯನ್ನು ಕೈಗೊಂಡಂತಾಗುತ್ತದೆ ಎಂದು ತಿಳಿಸಿದ್ದಾರೆ.

ಸುಮಾರು 150 ಎಕರೆ ಪ್ರದೇಶದಲ್ಲಿ ಗುಡ್ಡಗಾಡು ಇರುವುದರಿಂದ ಸ್ಥಳವನ್ನು ಗುರುತಿಸಿ ನಕ್ಷೆ ತಯಾರಿಸಿ ತಂತಿ ಬೇಲಿ ಹಾಕಿ ಪ್ರದೇಶವನ್ನು ರಕ್ಷಿಸಬೇಕಾಗಿದೆ. ರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳಿಗೆ ಅಗತ್ಯತೆಗಳನ್ನು ಒದಗಿಸುವುದು, ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು ಸೇರಿ ಪ್ರಾಣಿಗಳ ರಕ್ಷಣೆಗೆ ಬೇಕಾದ ಅಗತ್ಯಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ವಿವಿಧ ಸಂಘಟನೆಯ ಮುಖಂಡರಾದ ಶ್ರೀಕಾಂತಗೌಡ ಮಾಲಿಪಾಟೀಲ, ಕನ್ನಡಪರ ಸಂಘಟನೆಯ ಜಿಲ್ಲಾ ಮುಖಂಡ ಸಂತೋಷ ತೋಟದ, ಮಲ್ಲಿಕಾರ್ಜುನ ಹಡಪದ, ಸಹ ಕಾರ್ಯದರ್ಶಿ ಬಸವರಾಜ ಮುಂಡರಗಿ, ಉಪಾಧ್ಯಕ್ಷ ಹುಸೇನಸಾ ಮೋತೆಖಾನ, ನೀಲಪ್ಪ ಖಾನಾವಳಿ, ಶಾಮೀದಸಾಬ ತಾಳಕೇರಿ, ಮಾರುತಿ ವಾಲಿಕಾರ ಸೇರಿ ಅನೇಕರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT