ಗುರುವಾರ , ಏಪ್ರಿಲ್ 15, 2021
24 °C
₹3 ಸಾವಿರ ಮೌಲ್ಯದ ₹5ರ ನಾಣ್ಯ: ತುಲಾಭಾರ

ಕೊಪ್ಪಳ: ಶ್ರೀರಾಮ ಮಂದಿರಕ್ಕೆ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಅಯೋಧ್ಯೆದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ನಿರ್ಮಾಣಕ್ಕೆ ಮೂರು ತಿಂಗಳ ಮಗುವಿನ ತೂಕದಷ್ಟು ನಾಣ್ಯಗಳನ್ನು ತೂಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.

ಸಮೀಪದ ಭೈರಾಪುರ ಗ್ರಾಮದ ದೇವೇಂದ್ರಪ್ಪ ಮತ್ತು ಬುಡ್ಡಮ್ಮ ಪೂಜಾರ ಕುಟುಂಬ ಮೂರು ತಿಂಗಳದ 5 ಕೆಜಿ ಮಗುವಿನ ತೂಕದ ₹3 ಸಾವಿರ ಮೌಲ್ಯದ ₹5ರ ನಾಣ್ಯಗಳ ಮೂಲಕ ತೂಗಿ ನಿಧಿ ಸಮರ್ಪಣೆ ಮಾಡಿ ಭಕ್ತಿ ಮೆರೆದರು.

‘ಮಗುವಿನ ಶ್ರೇಯಸ್ಸು ಮತ್ತು ಭಗವಾನ್‌ ರಾಮನ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಇರಲಿ ಎಂದು ಹರಕೆ ಹೊತ್ತು ನಿಧಿಯನ್ನು ತನುಮನದಿಂದ ಸಮರ್ಪಿಸಿದ್ದೇವೆ’ ಎಂದು ಕುಟುಂಬದ ಸದಸ್ಯರು ಹೇಳಿದರು. ಬಿಜೆಪಿ ಗ್ರಾಮೀಣ ಮಂಡಲದ ಉಪಾಧ್ಯಕ್ಷ ಬಸವರಡ್ಡಿ ರಡ್ಡೇರ, ಪಂಚಾಯಿತಿ ಸದಸ್ಯ ನಿಂಗಪ್ಪ ಮೇಟಿ, ವೀರಯ್ಯ ಸಿಂದೋಗಿ, ಚಂದ್ರು ಮೇಟಿ, ಸಂತೋಷ ಕೊಂಡಲಹಳ್ಳಿ, ಮಾರುತಿ ಮೇಟಿ, ಗವಿ ಹಾಗೂ ಮುದಕಯ್ಯ ಸಸಿಮಠ ಅವರು
 ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು