ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಣ್ಣೆ ವರಸೆ: ರಾಜ್ಯಕ್ಕೆ 4 ಬೆಳ್ಳಿ, 8 ಕಂಚು

Published : 23 ಆಗಸ್ಟ್ 2024, 14:21 IST
Last Updated : 23 ಆಗಸ್ಟ್ 2024, 14:21 IST
ಫಾಲೋ ಮಾಡಿ
Comments

ಹನುಮಸಾಗರ: ಆಲ್ ಇಂಡಿಯಾ ಸಿಲಂಬಮ್ ಫೆಡರೇಷನ್ ವತಿಯಿಂದ ತಮಿಳುನಾಡಿನ ಷಣ್ಮುಗ ಎಜುಕೇಶನ್ ಇನ್ಸ್ಟಿಟ್ಯೂಟ್‌ನಲ್ಲಿ  ನಡೆದ 2ನೇ ರಾಷ್ಟ್ರಮಟ್ಟದ ಸಿಲಂಬಮ್ (ದೊಣ್ಣೆ ವರಸೆ) ಕಪ್‌ನಲ್ಲಿ ಕರ್ನಾಟಕ ತಂಡ 98 ಅಂಕ ಪಡೆದು ರನ್ನರ್ ಕಪ್‌ನ್ನು ಮುಡಿಗೇರಿಸಿಕೊಂಡಿದೆ. ಸ್ಪರ್ಧಿಗಳು 4 ಬೆಳ್ಳಿ, 8 ಕಂಚಿನ ಪದಕಗಳನ್ನು ಪಡೆದಿದ್ದಾರೆ.

‌ಈ ಬಗ್ಗೆ ಪ್ರಜಾವಾಣಿಗೆ ಮಾಹಿತಿ ನೀಡಿದ ಕರ್ನಾಟಕ ಸ್ಟೇಟ್ ಜನರಲ್ ಸೆಕ್ರೆಟರಿ ಮಹಾಂತೇಶ ಬೀಳಗಿ, ‘ವಿಜಯಪುರದ ಸಾಯಬಗೌಡ ಬಿರಾದಾರ ತಂಡದ ವ್ಯವಸ್ಥಾಪಕರಾಗಿದ್ದರು. 15 ರಾಜ್ಯಗಳು ಭಾಗವಹಿಸಿದ್ದವು. 10 ವರ್ಷ ವಿಭಾಗದ ಸಿಂಗಲ್ ಸ್ಟಿಕ್ ಮತ್ತು ಸ್ಟಿಕ್ ಫೈಪ್‌ನಲ್ಲಿ ಕೊಪ್ಪಳ ಜಿಲ್ಲೆಯ ಅಭಿಷೇಕ ಕೋರಿ 2 ಬೆಳ್ಳಿ ಪದಕ ಪಡೆದಿದ್ದಾರೆ. 14 ವರ್ಷ ವಿಭಾಗದ ಸ್ಪೇರ್ ಸ್ಟಿಕ್‌ ಮತ್ತು ಸ್ಟಿಕ್ ಫೈಟ್‌ನಲ್ಲಿ ಪವನಗೌಡ ನಾಡಗೌಡರ ತಲಾ ಒಂದೊಂದು ಕಂಚಿನ ಪದಕ ಪಡೆದಿದ್ದಾರೆ. ವಿದ್ಯಾರ್ಥಿಗಳು ಮುಂದೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ರಣವೀರ ಚೌಹಾಣ್ ಸ್ಟಿಕ್ ಫೈಟ್‌ 1 ಬೆಳ್ಳಿ, ಸಿಂಗಲ್ ಸ್ಟಿಕ್‌ನಲ್ಲಿ 1 ಕಂಚಿನ ಪಡೆದುಕೊಂಡಿದ್ದಾರೆ. ಅಮಿತ ರಾಥೋಡ ಸ್ಟಿಕ್ ಫೈಟ್‌ನಲ್ಲಿ 1 ಬೆಳ್ಳಿ, ಸಿಂಗಲ್ ಸ್ಟಿಕ್ ರೋಟೇಶನ್‌ನಲ್ಲಿ 1 ಕಂಚು ಪಡೆದಿದ್ದಾರೆ. ಚಿನ್ಮಯ ಬಿರಾದಾರ ಸಿಂಗಲ್ ಸ್ವಾರ್ಡ್, ಸ್ಟಿಕ್ ಫೈಟ್‌ನಲ್ಲಿ 2 ಕಂಚು ಹಾಗೂ ಪ್ರಜ್ವಲ ಚವಾಣ್ ಸಿಂಗಲ್ ಸ್ಟಿಕ್ ಮತ್ತು ಸ್ಟಿಕ್ ಫೈಟ್‌ನಲ್ಲಿ 2 ಕಂಚು ಗಳಿಸಿದ್ದಾರೆ. 

ಸ್ಪರ್ಧೆಯಲ್ಲಿ ಪದಕ ಗಳಿಸಿ ಗ್ರಾಮಕ್ಕೆ ಆಗಮಿಸಿದ ಪಟುಗಳನ್ನು ಕ್ರೀಡಾಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

ಮುಖಂಡರಾದ ಬಸವರಾಜ ದ್ಯಾವಣ್ಣವರ, ಅರ್ಬನ್‌ ಬ್ಯಾಂಕ್‌ನ ನಿರ್ದೇಶಕಿ ವಾಣಿ ಗೂಡಿಕೋಟಿ, ಮರೇಗೌಡ ಗೌಡಪ್ಪಣವರ, ಮಲ್ಲನಗೌಡ ನಾಡಗೌಡರ, ರಾಘವೇಂದ್ರ ಗೊಲ್ಲರ, ಮುತ್ತಣ್ಣ ಸಂಗಮದ, ಸರಸ್ವತಿ ಕೋರಿ, ಶೋಭಾ ನಾಡಗೌಡರ, ತರಬೇತುದಾರ ಮಲ್ಲೇಶ ಕೋಳೂರು, ಮಲ್ಲಿಕಾರ್ಜುನ ಬಡಿಗೇರ, ಗ್ರಾ.ಪಂ. ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸಂಸ್ಥೆಯ ಅಧ್ಯಕ್ಷ ಬಸವರಾಜ ಹಳ್ಳೂರ, ಸದಸ್ಯರಾದ ವಿಶ್ವನಾಥ ನಾಗೋರ, ಬಸವರಾಜ ಬಾಚಲಾಪುರ ಹಾಗೂ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT