ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ

Last Updated 7 ಜನವರಿ 2022, 11:38 IST
ಅಕ್ಷರ ಗಾತ್ರ

ಕೊಪ್ಪಳ: ನಗರ ಹಾಗೂ ಭಾಗ್ಯನಗರ ಪಟ್ಟಣದಲ್ಲಿ ವಿವಿಧ ಯೋಜನೆಯಡಿಯಲ್ಲಿ ಅಂದಾಜು ₹ 6 ಕೋಟಿಯ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೂಮಿ ಪೂಜೆ ನೇರವೆರಿಸಿದರು.

ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ ಕಟ್ಟಡ ಉದ್ಘಾಟನೆ, ನಗರಸಭೆಯ ವಾಣಿಜ್ಯ ಸಂಕೀರ್ಣ ಮಳಿಗೆ ಉದ್ಘಾಟನೆ ಸಿಸಿ ರಸ್ತೆ
ನಿರ್ಮಾಣ ಕಾಮಗಾರಿ ಹಾಗೂ ಕನಕದಾಸ ವೃತ್ತದ ಹತ್ತಿರ ವಾಣಿಜ್ಯ ಸಂಕೀರ್ಣ ಮಳಿಗೆಗಳ ಶಂಕುಸ್ಥಾಪನೆ ನೇರವೆರಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು, ‘ವೇಗವಾಗಿ ಅಭಿವೃದ್ಧಿ ಹೊಂದ್ದುತ್ತಿರುವ ಕೊಪ್ಪಳ ನಗರ ಹಾಗೂ ಭಾಗ್ಯನಗರ ಪಟ್ಟಣ ಅಭಿವೃದ್ಧಿಗೆ ಸುಮಾರು ₹ 100 ಕೋಟಿ ಅನುದಾನ ಬೇಕಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಅನುದಾನದ ಕೊರತೆ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಆಮೆವೇಗದಲ್ಲಿ ಸಾಗುತ್ತಿವೆ’ ಎಂದರು.

‘ಸರ್ಕಾರವು ಜನಸಂಖ್ಯೆ ಆಧಾರದ ಮೇಲೆ ಅನುದಾನ ಕೊಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಆದರೂ ಸಹ ಕೆಕೆಆರ್‌ಡಿಬಿ ಹಾಗೂ ನಗರೋತ್ಥಾನ ಯೋಜನೆಯಡಿಯಲ್ಲಿ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ಅತ್ಯವಶ್ಯಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಸರ್ಕಾರವು ಕೇವಲ ಕೋವಿಡ್ ನೆಪವೊಡ್ಡಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ವೈಫಲ್ಯ ಹೊಂದಿದ್ದು ಯಾವುದೇ ಹೊಸ ಯೋಜನೆಗಳನ್ನು ನಿರೂಪಿಸಲು ಅನುದಾನದ ಕೊರತೆ ಕಂಡುಬರುತ್ತಿದೆ ಎಂದರು.

ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಉಪಾದ್ಯಕ್ಷೆ ಜರೀನಾ ಬೇಗಂ ಅರಗಂಜಿ, ಎಸ್‍.ಬಿ. ನಾಗರಳ್ಳಿ, ಜುಲ್ಲೂ ಖಾದರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಟನ್ ಪಾಷ , ವೆಂಕನಗೌಡ್ರ ಹಿರೇಗೌಡ್ರ , ನಗರಸಭಾ ಸದಸ್ಯರುಗಳಾದ ಅಮ್ಜದ್ ಪಟೇಲ್ , ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಬಸಯ್ಯ ಹಿರೇಮಠ, ಅಜೀಂ ಅತ್ತಾರ, ಅಕ್ಬರ ಪಾಷ ಪಲ್ಟನ್, ರಾಜಶೇಖರ ಆಡೂರು, ಸರ್ವೇಶ ಬನ್ನಿಕೊಪ್ಪ, ಸೋಮಣ್ಣ ಹಳ್ಳಿ, ಪೌರಾಯುಕ್ತರು ರಮೇಶ ಬಡಿಗೇರಿ, ಸಹಾಯಕ ಅಭಿಯಂತರರು ಮಂಜುನಾಥ, ಮುಖಂಡರಾದ ಪ್ರಸನ್ನಾ ಗಡಾದ, ಶ್ರೀನಿವಾಸ ಗುಪ್ತಾ, ಕುರಗೋಡ ರವಿ, ಯಾದವ , ಸಲೀಂ ಅಳವಂಡಿ, ಗವಿಸಿದ್ದಪ್ಪ ಚಿನ್ನೂರು, ರಾಮಣ್ಣ ಕಲ್ಲನವರ್, ಇಬ್ರಾಯಿಮ್ ಅಡ್ಡೆವಾಲೆ, ಮಾನ್ವಿ ಪಾಷ, ಮಂಜುನಾಥ ಗೊಂಡಬಾಳ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT