ಮಂಗಳವಾರ, ನವೆಂಬರ್ 30, 2021
22 °C

ಗಂಗಾವತಿ: ಈದ್ ಮಿಲಾದ್ ಸರಳ ಆಚರಣೆ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರದಲ್ಲಿ ಮುಸ್ಲಿಂ ಸಮುದಾಯದವರು ಮಂಗಳವಾರ ಶ್ರದ್ಧಾ, ಭಕ್ತಿಯಿಂದ ಈದ್‌ ಮಿಲಾದ್‌ ಆಚರಿಸಿದರು.

ಬೆಳಿಗ್ಗೆ ಮನೆಗಳಲ್ಲಿ ಮಹಿಳೆಯರು ಮತ್ತು ಪುರುಷರು ವಿಶೇಷ ಪ್ರಾರ್ಥನೆ ಸಲ್ಲಿಸಿದರು‌. ನಂತರ ಪುರುಷರು ಮಸೀದಿಗೆ ಬಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಂತರ ನಗರದ ಎಲ್ಲ ಮಸೀದಿಗಳ ಮುಸ್ಲಿಮರು ಆಟೊ, ಟಾಟಾ ಏಸ್ ವಾಹನ, ತಳ್ಳುಗಾಡಿ ಮೇಲೆ ಮೆಕ್ಕಾ ಮದೀನಾ, ಜಾಮೀಯಾ ಮಸೀದಿ, ಕುತುಬ್‌ ಮಿನಾರ್‌ ಪ್ರತಿಕೃತಿ ಇರಿಸಿ ಮೆರವಣಿಗೆ ಮಾಡಲಾಯಿತು.

ಈ ಮೆರವಣಿಗೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಚಿಣ್ಣರರಿಂದ ವಯಸ್ಕರ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಗೀತಕ್ಕೆ ಭಕ್ತಿಯಿಂದ ಭಾವದಿಂದ ಹೆಜ್ಜೆಗಳು ಹಾಕಿದರು.

ಮೆರವಣಿಗೆಯಲ್ಲಿ ಅರ್ಧ ಚಂದ್ರದ ಧ್ವಜ ಹಾಗೂ ಹಸಿರು ವರ್ಣದ ಧ್ವಜಗಳು ರಾರಾಜಿಸಿದವು. ಹಾಗೇಯೆ ದೇವರ ಹೆಸರಲ್ಲಿ ಆರಾಧನೆ ಮಾಡುತ್ತಾ, ಮಹ್ಮದ್ ಪೈಗಂಬರ್ ಸಂದೇಶಗಳ ಕುರಿತು ಘೋಷಣೆಕೂಗಿದರು.

ನಗರದ ಬೆರೋನಿ ಮಸೀದಿ ಕಡೆಯಿಂದ ಆರಂಭಗೊಂಡ ಮೆರವಣಿಗೆ ಪೀರ್ ಜಾಧವ ಓಣಿ, ಬಸವಣ್ಣ ಸರ್ಕಲ್ ಮೂಲಕ ಜಾಮೀಯಾ ಮಸೀದಿಗೆ ತೆರಳಿ ಸಮಾರೋಪ ಆಯಿತು.

ನೂರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮೆರಗು ತಂದರು. ನಗರದಲ್ಲಿ ಶಾಂತಿ ಕಾಪಾಡಲು ನಗರ ಪೋಲಿಸ್ ಠಾಣೆ ಸಿಬ್ಬಂದಿ ವತಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್‌.ಆರ್ ಶ್ರೀನಾಥ, ಮುಖಂಡರಾದ ಖಾಜಿಸಾಬ್, ಮೀರ್ ಅಹ್ಮದ್ ಅಲಿ ಹಾಜಿ, ಬಿಚ್ಚಿಗತ್ತಿ ಮಹ್ಮದ್ ಉಸ್ಮಾನ್, ಅಯೂಬ್ ಖಾನ್, ಮಹ್ಮದ್ ಅಲ್ತಾಫ್, ಸೈಯದ್ ನಾಜೀಂ, ಸಂತೋಷ್ ರಾಯ್ಕರ್, ಶಬ್ಬೀರ್ ಭರಣಿ, ಡಿಶ್ ಜಿಲಾನಿ, ಸಾಧಿಕ್, ಜಿನ್ನಾ ಮನಿಯಾರ್, ಅನ್ವರ್, ಹನುಮಂತಪ್ಪ ನಾಯಕ್, ಬಸಪ್ಪ ನಾಯಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು