ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಹಿಡಿದ ಕೊಪ್ಪಳ, ನಿರೀಕ್ಷೆ ಹುಸಿಗೊಳಿಸಿದ ಗಂಗಾವತಿ, ಶಿರಗುಪ್ಪ

ಬಿಜೆಪಿ, ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಉಲ್ಟಾ: ಕರಡಿ ಗೆಲುವು
Last Updated 24 ಮೇ 2019, 19:56 IST
ಅಕ್ಷರ ಗಾತ್ರ

ಕೊಪ್ಪಳ: ಬಿಜೆಪಿ ಅಭ್ಯರ್ಥಿ ಸಂಗಣ್ಣ ಗೆಲುವಿಗೆ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಮಸ್ಕಿ ವಿಧಾನಸಭಾ ಕ್ಷೇತ್ರಗಳು ಕಾರಣವಾದರೆ, ಸಿಂಧನೂರ ಮತ್ತು ಶಿರಗುಪ್ಪದಲ್ಲಿ ಕಡಿಮೆ ಅಂತರ ಬಂದಿದ್ದು, ಬಿಜೆಪಿ ನಾಯಕರ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಹೋದರ, ಹಾಲಿ ಶಾಸಕ ಮತ್ತು ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ ಅವರಿದ್ದರೂ ರಾಜಶೇಖರಗೆ 79,446 ಮತ ಬಂದಿದೆ.ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ 91,124 ಮತ ಪಡೆದು 11,678 ಮತಗಳ ಮುನ್ನಡೆ ಪಡೆಯುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.

ಕ್ಷೇತ್ರದಲ್ಲಿ ಪ್ರಭಾವಿ, ಸಿದ್ದರಾಮಯ್ಯನವರ 'ಮಾನಸ ಪುತ್ರ' ಎಂದೇ ಬಿಂಬಿತವಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸ್ವಕ್ಷೇತ್ರದಲ್ಲಿಯೇ ತಮ್ಮ ಸಹೋದರನಿಗೆ ಹೆಚ್ಚಿನ ಮುನ್ನಡೆಗೆ ಕಾರಣವಾಗದೇ ಇರುವುದು ಪಕ್ಷದಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ.

ಕೊಪ್ಪಳ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಅವರ ಪ್ರಯತ್ನದಿಂದ ಹೆಚ್ಚಿನ ಮತ ಪಡೆಯಲಾಗಿದ್ದು, ಬಿಜೆಪಿಯ ಸಾಂಪ್ರದಾಯಿಕ ಮತ ಮತ್ತು ರಡ್ಡಿ ಸಮಾಜದ ನಿರ್ಣಾಯಕ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ ಎಂದು ವಿಶ್ಲೇಷಿಸಲಾಗುತ್ತದೆ.

ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಕೂಡಾ ಹೆಚ್ಚಿನ ಮತಗಳನ್ನು 'ಸಿವಿಸಿ' ತಂದು ಕೊಡಬೇಕು ಎಂದು ಫರ್ಮಾನು ಹೊರಡಿಸಿದ್ದರು. ತಮ್ಮ ಪಕ್ಷದ ನಾಯಕರ ಮಾತನ್ನು ಈಗ ನಿಜ ಮಾಡಿದ್ದಾರೆ.

ಯಲಬುರ್ಗಾ: ಈ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪ್ರಭಾವಿ ಮುಖಂಡ ಬಸವರಾಜ ರಾಯರಡ್ಡಿ ಇದ್ದರೂ ಕಾಂಗ್ರೆಸ್‌ ಅಭ್ಯರ್ಥಿಗೆ ಕಡಿಮೆ ಮತಬಂದಿವೆ. ಈ ಸಾರಿ ಇಲ್ಲಿ ಬಿಜೆಪಿ ಗೆಲುವಿನ ಅಂತರ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಹಾಲಿ ಶಾಸಕ ಹಾಲಪ್ಪ ಆಚಾರ ಅವರು ಸಂಘಟಿತ ಪ್ರಚಾರ ನಡೆಸಿದ್ದರೂ ಕೇವಲ 8.072 ಮತದಿಂದ ಬಿಜೆಪಿ ಮುನ್ನಡೆ ಸಾಧಿಸಿದೆ.ಇಲ್ಲಿ ಕರಡಿ 76.621, ಹಿಟ್ನಾಳ 68.549 ಮತ ಪಡೆದಿದ್ದಾರೆ. ರಾಯರಡ್ಡಿ ಎಂದಿನಂತೆ ಅಪರೋಕ್ಷವಾಗಿ ಪರಾಭಗೊಂಡಿದ್ದಾರೆ.

ಕುಷ್ಟಗಿ: ಈ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯಿದ್ದರೂ ಜಾತಿ ನೋಡಿ ಮತದಾರರು ಮಣೆ ಹಾಕುತ್ತಿರುವುದು ಕಳೆದ ಎಲ್ಲ ಚುನಾವಣೆಗಳಲ್ಲಿ ವ್ಯಕ್ತವಾಗಿದೆ. ಹಾಲಿ ಶಾಸಕ ಅಮರೇಗೌಡ ಬಯ್ಯಾಪುರ ಲಿಂಗಾಯತ ಸಮಾಜಕ್ಕೆ ಸೇರಿದ್ದರೂ ಅವರ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಲ್ಲ. ಈ ಹಿಂದೆ ಶಾಸಕರಾಗಿದ್ದ ಬಿಜೆಪಿಯ ದೊಡ್ಡನಗೌಡ ಪಾಟೀಲ ಕುರುಬ ಸಮಾಜಕ್ಕೆ ಸೇರಿದ್ದರೂ, ಕಾಂಗ್ರೆಸ್ ಪಕ್ಷದ ಬಸವರಾಜ ಹಿಟ್ನಾಳ ಅವರನ್ನು ಬೆಂಬಲಿಸಿದ್ದು, ಸ್ಪಷ್ಟವಾಗಿ ಗೋಚರಿಸಿದೆ. ಇಲ್ಲಿ ಕರಡಿ72.474, ಹಿಟ್ನಾಳ64.649 ಮತ ಪಡೆದಿದ್ದಾರೆ. ಬಿಜೆಪಿ 7.825 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

ಸಿಂಧನೂರ: ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ಇಲ್ಲಿ ಸಮಬಲ ಸಾಧಿಸಿದೆ. ಕರಡಿಗೆ 71.441, ಹಿಟ್ನಾಳಗೆ 71.361 ಮತ ಪಡೆಯುವ ಮೂಲಕ ಕೇವಲ 80 ಮತಗಳ ಅಂತರದಿಂದ ಬಿಜೆಪಿ ಮುನ್ನೆಡೆ ಸಾಧಿಸಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಸಚಿವ ವೆಂಕಟರಾವ್ ನಾಡಗೌಡ ಅವರು ಕಾಂಗ್ರೆಸ್ ಪರ ಪ್ರಚಾರ ಇಲ್ಲಿ ಪ್ರಭಾವ ಬೀರಿದೆ.

ಮಸ್ಕಿ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಪ್ರತಾಪ್‌ಗೌಡ ಪಾಟೀಲ ಇದ್ದಾರೆ. ಕರಡಿ64.538, ಹಿಟ್ನಾಳ52.467 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 12,071 ದಾಖಲೆ ಅಂತರಗಳಿಂದ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ವಿರುದ್ಧ ಇಲ್ಲಿನ ಶಾಸಕರು ಅಸಮಾಧಾನಗೊಂಡಿರುವುದು ನಿಜವಾಗಿದೆ.

ಶಿರಗುಪ್ಪ: ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಸೋಮಲಿಂಗಪ್ಪ ಇದ್ದರೂ ಪಕ್ಷ ಹಿನ್ನೆಡೆ ಸಾಧಿಸಿದೆ. ಕರಡಿ61.453, ಹಿಟ್ನಾಳ 73.587 ಮತ ಪಡೆದಿದ್ದಾರೆ. ಕಾಂಗ್ರೆಸ್‌ ಇಲ್ಲಿ 12.134 ದಾಖಲೆ ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಕನಕಗಿರಿ: ಕನಕಗಿರಿ ಮತಕ್ಷೇತ್ರದಲ್ಲಿ ಬಿಜೆಪಿ77.059, ಕಾಂಗ್ರೆಸ್69.763 ಮತ ಪಡೆದಿವೆ. ಬಿಜೆಪಿ ಇಲ್ಲಿ 7.711 ಮತಗಳ ಮುನ್ನಡೆ ಸಾಧಿಸಿದೆ. ಈ ವಿಧಾನ ಸಭಾ ಕ್ಷೇತ್ರದಲ್ಲಿ ಬಸವರಾಜ ದಡೇಸಗೂರ ಮತ್ತು ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ನಡುವಿನ ಹೋರಾಟ ಎಂದೇ ಬಿಂಬಿತವಾಗಿತ್ತು. ಕಳೆದ ಸಾರಿ ಈ ಕ್ಷೇತ್ರದಲ್ಲಿ ಬಿಜೆಪಿ 13 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಬಿಜೆಪಿ ಈ ಕ್ಷೇತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು.

ಒಟ್ಟಾರೆಯಾಗಿಬಿಜೆಪಿ ಯಲಬುರ್ಗಾ, ಸಿಂಧನೂರ, ಮಸ್ಕಿ, ಶಿರಗುಪ್ಪ, ಗಂಗಾವತಿ, ಕನಕಗಿರಿ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರೆ, ಕಾಂಗ್ರೆಸ್ ಕೊಪ್ಪಳ, ಕುಷ್ಟಗಿ, ಗಂಗಾವತಿ, ಸಿಂಧನೂರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಈ ಚುನಾವಣೆಯಲ್ಲಿ ಎರಡು ಪಕ್ಷದ ನಾಯಕರ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

ಶಿರಗುಪ್ಪ ಕಾಂಗ್ರೆಸ್ ಕೈ ಹಿಡಿದರೆ, ಮಸ್ಕಿ, ಕೊಪ್ಪಳ ಬಿಜೆಪಿ ಕೈ ಹಿಡಿಯುವ ಮೂಲಕ ಗೆಲುವಿನ ದಡ ಸೇರಿಸಿದೆ.

ಅಂಕಿ-ಅಂಶ

ವಿಧಾನ ಸಭಾವಾರು ಪಡೆದ ಮತ

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಅಂತರ

ಸಿಂಧನೂರು 71.441 71.36180

ಮಸ್ಕಿ 64.538 52.46712,071

ಕುಷ್ಟಗಿ 72.474 64.6497.825

ಕನಕಗಿರಿ 77.05969.7637.711

ಗಂಗಾವತಿ 70.28767.751 2.530

ಯಲಬುರ್ಗಾ 76.62168.5498.072

ಕೊಪ್ಪಳ 91.12479.44611,678

ಸಿರಗುಪ್ಪ 61.45373.58712.134

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT